Sunday, December 4, 2022

Latest Posts

ಹೊಂಬಾಳೆ ಫಿಲ್ಮ್ಸ್ ಜತೆ ಕಿಚ್ಚ ಸುದೀಪ್, ಇದೇನಿದು ಹೊಸಾ ವಿಷ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿಚ್ಚ ಸುದೀಪ್ ಹೊಂಬಾಳೆ ಫಿಲ್ಮ್ಸ್ ಜತೆ ಕೈ ಜೋಡಿಸಿದ್ದಾರೆ. ಇದೇನಿದು ಹೊಸಾ ವಿಷಯ ಅಂತೀರಾ?
ಹೌದು, ಇದು ನಿಜ ಅನ್ನೋದಕ್ಕೆ ಕಾರಣವೂ ಇದೆ.
ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಜತೆ ಸುದೀಪ್ ಸೆಲ್ಫೀ ತೆಗೆದುಕೊಂಡಿದ್ದಾರೆ.
ಇದಕ್ಕೆ ಟು ದಿ ನ್ಯೂ ಬಿಗಿನಿಂಗ್ಸ್ ಎನ್ನುವ ಕ್ಯಾಪ್ಷನ್ ಕೂಡ ಹಾಕಿದ್ದಾರೆ. ಹೀಗಾಗಿ ಸುದೀಪ್ ಮುಂದಿನ ಸಿನಿಮಾ ಹೊಂಬಾಳೆ ಬ್ಯಾನರ್‌ನಿಂದ ಬರುವುದು ಬಹುತೇಕ ಪಕ್ಕಾ ಆಗಿದೆ.

ಕಾರಣ ಇಲ್ಲದೇ ಈ ರೀತಿ ಫೋಟೊಗಳು ಅಪ್‌ಲೋಡ್ ಆಗುವುದಿಲ್ಲ, ಅಭಿಮಾನಿಗಳ ಕುತೂಹಲ ಹೆಚ್ಚಿಸೋಕೆ, ಸಿನಿಮಾ ಬಗ್ಗೆ ಸಸ್ಪೆನ್ಸ್ ಕ್ರಿಯೇಟ್ ಮಾಡಲು ಹೀಗೆ ಮಾಡುತ್ತಾರೆ. ಆದರೆ ಇದಕ್ಕೆ ಸಾಕಷ್ಟು ಸ್ಪಷ್ಟನೆ ಇಲ್ಲ. ಏನಾಗುತ್ತದೋ ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!