ನೀವು ಎಂದಾದರೂ ಹೀರೇಕಾಯಿ ಸಿಪ್ಪೆ ಚಟ್ನಿ ಮಾಡಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು :

ಹೀರೇಕಾಯಿ ಸಿಪ್ಪೆ – 1 ಕಪ್,
ಬೆಳ್ಳುಳ್ಳಿ – 4,
ಕರಿಬೇವು – ಗೊಂಚಲು,
ಎಣ್ಣೆ – ಸಾಕಷ್ಟು,
ಟೊಮೆಟೊ – 1,
ಹಸಿಮೆಣಸಿನಕಾಯಿ – 10,
ಸಾಸಿವೆ, ಜೀರಿಗೆ – ಟೀ ಚಮಚ,
ಉಪ್ಪು – ರುಚಿಗೆ,
ಕಡಲೆಬೇಳೆ – ಅರ್ಧ ಚಮಚ

ಮಾಡುವ ವಿಧಾನ: 

ಮೊದಲಿಗೆ ಸ್ಟವ್ ಆನ್ ಮಾಡಿ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ, ಕತ್ತರಿಸಿದ ಹಸಿಮೆಣಸಿನಕಾಯಿಯನ್ನು ಹಾಕಿ ಸುಮಾರು ಐದು ನಿಮಿಷ ಫ್ರೈ ಮಾಡಿ. ನಂತರ ಹೀರೇಕಾಯಿ ಸಿಪ್ಪೆ ಹಾಕಿ ಅದು ಬೇಯುವ ತನಕ ಪ್ಲೇಟ್ ಮುಚ್ಚಿ ಮಧ್ಯೆ ಮಧ್ಯೆ ತಿರುಗಿಸಿ. ಹದಿನೈದು ನಿಮಿಷಗಳ ಬಳಿಕ ಸಣ್ಣ ತುಂಡುಗಳಾಗಿ ಕತ್ತರಿಸಿದ ಟೊಮೆಟೊವನ್ನು ಸೇರಿಸಿ. ಟೊಮೆಟೊ ಬೆಂದ ನಂತರ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಡಿ.
ಈ ಮಿಶ್ರಣಕ್ಕೆ ಸ್ವಲ್ಪ ಜೀರಿಗೆ ಮತ್ತು ಉಪ್ಪನ್ನು ಸೇರಿಸಿ ನುಣ್ಣಗೆ ಮಿಕ್ಸಿ ಮಾಡಿ.

ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಕಡಲೆಬೇಳೆ, ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿದರೆ ರುಚಿಕರವಾದ ಹೀರೇಕಾಯಿ ಚಟ್ನಿ ರೆಡಿ. ರೊಟ್ಟಿ, ಬಿಸಿ ಅನ್ನ, ಚಪಾತಿ ಎಲ್ಲದಕ್ಕೂ ಹೇಳಿಮಾಡಿಸಿದಂತಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!