ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಿಸಾನ್ ರೈಲು. ರೈತರಿಗೆ ಪ್ರಯೋಜನವಾಗಲೆಂದೇ ಭಾರತ ಸರ್ಕಾರ ಪ್ರಾರಂಭಿಸಿದ್ದ ಹೊಸ ಯೋಜನೆ. ಇದು ರೈತರಿಗೆ ತಮ್ಮ ಉತ್ಪನ್ನಗಳಿಗೆ ವಿಸ್ತಾರದ ಮಾರುಕಟ್ಟೆ ಕಂಡುಕೊಳ್ಳುವುದಕ್ಕೆ ಸಹಾಯವಾಗಿದೆ. ಉದಾಹರಣೆಗೆ, ಕೋಲಾರದ ಮಾವಿನ ಹಣ್ಣು ದೆಹಲಿಯಲ್ಲೂ ಮಾರುಕಟ್ಟೆ ಕಂಡುಕೊಳ್ಳುವುದಕ್ಕೆ ಕಿಸಾನ್ ರಾಲಿನಿಂದಾಗಿ ಅವಕಾಶವಾಗಿದೆ.
ಆಗಸ್ಟ್ 2020ರಲ್ಲಿ ಈ ಸೇವೆ ಪ್ರಾರಂಭವಾದ ಮೇಲೆ, ಇದು ಎಷ್ಟರಮಟ್ಟಿಗೆ ರೈತರಿಗೆ ಸೇವೆ ಕೊಟ್ಟಿದೆ ಎಂಬ ಬಗ್ಗೆ ಡಿಸೆಂಬರ್ 2021ರವರೆಗೆ ಅಂಕಿಅಂಶಗಳು ಲಭ್ಯವಾಗಿವೆ.
153 ಮಾರ್ಗಗಳಲ್ಲಿ 1806 ಕಿಸಾನ್ ರೈಲು ಸೇವೆ ಸಂಪನ್ನವಾಗಿದ್ದು ಇವು 5.9 ಲಕ್ಷ ಟನ್ನುಗಳ ಕೃಷಿ ಉತ್ಪನ್ನಗಳನ್ನು ಸಾಗಿಸಿವೆ. ಇವುಗಳಲ್ಲಿ ಬೇಗ ಕೆಡುವಂಥ ಕೃಷಿ ಪದಾರ್ಥಗಳಿಗೆ ಆದ್ಯತೆ ಸಿಕ್ಕಿದೆ. ಹಣ್ಣು, ಹಾಲು, ಮೀನು ಇತ್ಯಾದಿ ಉತ್ಪನ್ನಗಳು ಕಿಸಾನ್ ರೈಲಿನ ಮೂಲಕ ಬೇರೆ ಬೇರೆ ರಾಜ್ಯಗಳಲ್ಲಿ ಮಾರುಕಟ್ಟೆ ಕಂಡುಕೊಂಡಿವೆ.