Sunday, June 4, 2023

Latest Posts

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ: ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರರ

ಹೊಸದಿಗಂತ ವರದಿ, ಕಲಬುರಗಿ:

ರಾಜಕೀಯ ಪಕ್ಷಗಳು ಅಂದ ಮೇಲೆ ನಿರಂತರ ಬದಲಾವಣೆ ಇರುತ್ತೆ. ಆದರೆ, ಇವಾಗ ನಡೆದಿರುವ ಚರ್ಚೆ ಕೇವಲ ಉಹಾಪೋಹ ಮಾತ್ರ ಎಂದು ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ತಿಳಿಸಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟದಲ್ಲಿ ಉಳಿದ ನಾಲ್ಕು-ಐದು ಸ್ಥಾನಗಳನ್ನು ತುಂಬುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡಿಕೊಂಡು ಬರುತ್ತಿದ್ದು,ಮುಂಬರುವ ಚುನಾವಣೆಯೂ ಅವರ ನೇತೃತ್ವದಲ್ಲಿ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿ ಅವರು ಎಂದು ಕೂಡ ಮಲತಾಯಿ ಧೋರಣೆ ತೋರಿಲ್ಲ. ಈ ಭಾಗಕ್ಕೆ ವಿಶೇಷ ಕಾಳಜಿ ವಹಿಸಿ, ಅನುದಾನ ಬಿಡುಗಡೆ ಮಾಡಿ,ಅಭಿವೃದ್ಧಿ ಕೆಲಸವನ್ನು ಮಾಡುವುದಕ್ಕೆ ಮುಂದಾಗಿದ್ದಾರೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ಹಿರಿಯರು, ಅವರ ಹೇಳಿಕೆ ಅವರಿಗೆ ಮಾತ್ರ ಸಿಮಿತ. ಸಚಿವ ಸಂಕ್ರಾಂತಿ ಮೊದಲು ಆಥವಾ ನಂತರ ಸಚಿವ ಸಂಪುಟದ ಭತಿ೯ ಮಾಡುವುದು ಮುಖ್ಯ ಮಂತ್ರಿಗಳಿಗೆ ಬಿಟ್ಟಿದ್ದು ಎಂದರು.
ಕಲಬುರಗಿಯಲ್ಲಿ ಗುತ್ತೀಗೆದಾರರು 40% ಕಮೀಷನ್ ಕೇಳುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಹಣ ತೆಗೆದುಕೊಳ್ಳೋದು ಎಷ್ಟು ಅಪರಾಧವೋ, ಹಣ ಕೊಡುವುದು ಸಹ ಅಷ್ಟೇ ಅಪರಾಧ. ನಮ್ಮ ಸರಕಾರವಾಗಲಿ,ನಮ್ಮ ಶಾಸಟರಾಗಲಿ ಯಾರು ಪಸೆ೯ಂಟೆಜ್ ಬೇಡಿಕೆ ಇಟ್ಟಿಲ್ಲ ಎಂದರು.
ಗುತ್ತೀಗೆದಾರರ ಹೋರಾಟ ಕಾಂಗ್ರೆಸ್ ಪಕ್ಷದ ಪ್ರಾಯೋಜಿತ ಹೋರಾಟವಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!