ಭಾರತ- ನ್ಯೂಜಿಲ್ಯಾಂಡ್​ ವನಿತೆಯರ ಏಕದಿನ ಕ್ರಿಕೆಟ್: 4ನೇ ಪಂದ್ಯದಲ್ಲೂ ಗೆದ್ದು ಬೀಗಿದ ಕಿವೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ನ್ಯೂಜಿಲ್ಯಾಂಡ್​ ವನಿತೆಯರು 4ನೇ ಏಕದಿನ ಪಂದ್ಯದಲ್ಲಿ ರನ್​ ಮಳೆ ಸುರಿಸಿದ ಕಿವೀಸ್ ಭಾರತ ವನಿತೆಯರ ವಿರುದ್ಧ 63 ರನ್​ಗಳ ಭರ್ಜರಿಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲ್ಯಾಂಡ್​ ತಂಡ 4-0 ಅಂತರದಲ್ಲಿ ಮುನ್ನಡೆ ಪಡೆದಿದೆ.
ಕ್ವೀನ್ಸ್​ಟೌನ್​ನಲ್ಲಿ ನಡೆದ 4ನೇ ಏಕದಿನ ಪಂದ್ಯಕ್ಕೆ ವರುಣನ ಆಗಮನ ಹಿನ್ನೆಲೆ ಪಂದ್ಯವನ್ನು 20 ಓವರ್​ಗೆ ಕಡಿತ ಮಾಡಲಾಯಿತು.
ಭಾರತದ ವನಿತೆಯರ ಬೌಲಿಂಗ್ ದುಬಾರಿಯಾಗಿದ್ದು, , ನ್ಯೂಜಿಲ್ಯಾಂಡ್​ ಬೃಹತ್​ ಮೊತ್ತ ಕಲೆ ಹಾಕಿತು. 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 191 ರನ್​ ಗಳಿಸಿತು.
ಇನ್ನು ಬೃಹತ್​ ಮೊತ್ತ ಬೆಂಬತ್ತಿದ ಭಾರತದ ವನಿತೆಯರು ಒಂದರ ಹಿಂದೆ ಒಂದು ವಿಕೆಟ್​ ಕಳೆದುಕೊಂಡು ಪೆವಿಲಿಯನ್​ ಪರೇಡ್ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!