ವಿರಾಟ್, ನೀನು ಇಡೀ ವಿಶ್ವಕ್ಕೆ ಕಿಂಗ್​ ಕೊಹ್ಲಿ,ಆದರೆ, ನನಗೆ ಎಂದಿಗೂ ನೀನು ಚೀಕೂ: ಭಾವನಾತ್ಮಕ ಪತ್ರ ಬರೆದ ಯುವರಾಜ್ ಸಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ತಂಡದ ಮಾಜಿ ಆಟಗಾರ , ಸಿಕ್ಸರ್​ ಕಿಂಗ್ ​ ಯುವರಾಜ್ ಸಿಂಗ್ ವಿರಾಟ್​ ಕೊಹ್ಲಿಗೆ ಭಾವನಾತ್ಮಕ ಪತ್ರ ಬರೆಯುವ ಮೂಲಕ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

‘ಡೆಲ್ಲಿಯ ಪುಟ್ಟ ಹುಡುಗ ವಿರಾಟ್​ ಕೊಹ್ಲಿಗೆ.. ನಾಯಕತ್ವದ ಜೀವನ ಅಂತ್ಯಗೊಳಿಸುತ್ತಿರುವ ಈ ಸಂದರ್ಭದಲ್ಲಿ ಲಕ್ಷಾಂತರ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದ್ದಕ್ಕೆ, ಈ ವಿಶೇಷ ಶೂಗಳನ್ನು ನಾನು ನಿಮಗಾಗಿ ಅರ್ಪಿಸುತ್ತಿದ್ದೇನೆ.`ನೀವು ಹೇಗಿದ್ದೀರೋ ಹಾಗೆಯೇ ಇರುತ್ತೀರಿ, ನೀವು ನಿಮ್ಮ ರೀತಿಯಲ್ಲಿ ಆಟವಾಡಿ ಮತ್ತು ದೇಶವನ್ನು ಹೆಮ್ಮೆ ಪಡುವಂತೆ ಮಾಡುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಯುವರಾಜ್​ ಪತ್ರದ ಪೋಸ್ಟ್​ ತಲೆಬರಹದಲ್ಲಿ ಬರೆದುಕೊಂಡಿದ್ದಾರೆ.

‘ವಿರಾಟ್, ನೀನು ಇಡೀ ವಿಶ್ವಕ್ಕೆ ಕಿಂಗ್​ ಕೊಹ್ಲಿ, ಆದರೆ, ನನಗೆ ಎಂದಿಗೂ ನೀನು ಎಂದಿಗೂ ಚೀಕೂ … ನೀವು ಒಬ್ಬ ಕ್ರಿಕೆಟಿಗನಾಗಿ ಮತ್ತು ವ್ಯಕ್ತಿಯಾಗಿ ಬೆಳೆಯುವು ದನ್ನುನೋಡಿದ್ದೇನೆ. ನೆಟ್ಸ್​ನಲ್ಲಿ ಯುವಕನಾಗಿದ್ದ ವೇಳೆಯೂ ನೀವು ಕ್ರಿಕೆಟ್‌ನ ದಿಗ್ಗಜರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆದಿದ್ದೀರಿ. ನೀವು ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ದಂತಕಥೆಯಾಗಿದ್ದೀರಿ. ನಿಮ್ಮ ಶಿಸ್ತು, ಮೈದಾನದಲ್ಲಿನ ಉತ್ಸಾಹ ಮತ್ತು ಕ್ರೀಡೆಯಲ್ಲಿನ ಸಮರ್ಪಣೆ ದೇಶದ ಪ್ರತಿ ಮಗು ಕ್ರಿಕೆಟ್‌ ಬಗ್ಗೆ ಉತ್ಸಾಹ ಹೊಂದುವುದಕ್ಕೆ ಮತ್ತು ಮುಂದೊಂದು ದಿನ ಪ್ರತಿಯೊಬ್ಬರಲ್ಲೂ ನೀಲಿ ಜೆರ್ಸಿಯನ್ನು ತೊಡುವ ಕನಸಿಗೆ ಪ್ರೇರೇಪಣೆಯಾಗಿದೆ’.

ಪ್ರತಿ ವರ್ಷವೂ ನಿಮ್ಮ ಕ್ರಿಕೆಟ್ ಆಟದ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದೀರಿ. ಈ ಸುಂದರ ಆಟದಲ್ಲಿ ನೀವು ಈಗಾಗಲೇ ಸಾಕಷ್ಟು ಸಾಧಿಸಿದ್ದೀರಿ. ನೀವೊಬ್ಬ ದಿಗ್ಗಜ ನಾಯಕ ಮತ್ತು ಅದ್ಭುತ ಲೀಡರ್​. ನಿಮ್ಮೊಳಗಿನ ಜ್ವಾಲೆ ಯಾವಾಗಲು ಉರಿಯುತ್ತಿರಲ, ನೀವೊಬ್ಬ ಸೂಪರ್‌ಸ್ಟಾರ್.‌ ನಿಮಗಾಗಿ ಈ ವಿಶೇಷ ಚಿನ್ನದ ಬೂಟ್​. ದೇಶ ಹೆಮ್ಮೆ ಪಡುವಂತೆ ಮಾಡುವುದನ್ನು ಮುಂದುವರಿಸಿ ಎಂದು ಕೊಹ್ಲಿಗೆ ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!