Monday, September 26, 2022

Latest Posts

ಕೊಡಗು: ಜಿಲ್ಲಾ ಮಟ್ಟದ ಉತ್ತಮ ‌ಶಿಕ್ಷಕ‌ ಪ್ತಶಸ್ತಿಗೆ 10 ಮಂದಿ ಆಯ್ಕೆ

ಹೊಸ ದಿಗಂತ ವರದಿ, ಮಡಿಕೇರಿ:

ಪ್ರಸಕ್ತ (2022-23) ಸಾಲಿನ ಜಿಲ್ಲಾ ಮಟ್ಟದ ಉತ್ತಮ ‌ಶಿಕ್ಷಕ‌ ಪ್ತಶಸ್ತಿಗೆ 10ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಭಾನುವಾರ ನಗರದ ಕ್ರಿಸ್ಟಲ್‌ ಕೋರ್ಟ್ ಸಭಾಂಗಣದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಕೈಕಾಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಿ.ಆರ್ ಭಾರತಿ, ಕೆ.ಪಿ.ಬಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಿ.ಕೆ ರೇಖಾಕುಮಾರಿ, ಬಲ್ಲಮಾವಟಿ ನೇತಾಜಿ‌ ಅನುದಾನಿತ ಪ್ರೌಢಶಾಲೆಯ ಎನ್.ಕೆ.ಮೆಹಬೂಬ್ ಸಾಬ್ ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆ ತಾಲೂಕಿನ ಅಂಜನಗೇರಿ ಬೆಟ್ಟಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಕೆ.ಎಲ್.ಉದಯಕುಮಾರ್, ನ್ಯಾಯದಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಜಿ.ಇ.ಮಂಜುಳಾಮಣಿ,ಗೌಡಳ್ಳಿ ಪ್ರೌಢಶಾಲೆಯ‌ ಸಹಶಿಕ್ಷಕ ಬಿ.ಬಿ.ದಿನೇಶ್ ಆಯ್ಕೆಗೊಂಡಿದ್ದಾರೆ.
ವೀರಾಜಪೇಟೆ ತಾಲೂಕಿನ ಬೈರಂಬಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಹೆಚ್.ಎನ್. ಪದ್ಮಾ, ಚೂರಿಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಬಿ.ಕೆ.ವಿಜಯಲಕ್ಷ್ಮಿ, ಅಮ್ಮತ್ತಿ ಒಂಟಿಯಂಗಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ವಿ.ಮಂಜುನಾಥ್ ಹಾಗೂ ಬಿಳುಗುಂದ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಹೆ.ಜಿ.ಸಾವಿತ್ರಿ ಅವರನ್ನು ಆಯ್ಕೆಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!