Wednesday, October 5, 2022

Latest Posts

‘ಕೊಹಿನೂರ್ ವಜ್ರ ಪುರಿ ಜಗನ್ನಾಥ ದೇವರಿಗೆ ಸೇರಿದ್ದು, ಅದನ್ನು ತರಿಸಿಕೊಡಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಹಿನೂರ್ ವಜ್ರ ಜಗನ್ನಾಥ ದೇವರಿಗೆ ಸೇರಿದ್ದು, ಅದನ್ನು ವಾಪಾಸ್ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಲಾಗಿದೆ. ಐತಿಹಾಸಿಕ ಪುರಿ ಜಗನ್ನಾಥ ದೇವಾಲಯಕ್ಕೆ ಕೊಹಿನೂರ್ ವಜ್ರ ಸೇರಬೇಕು. ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಅದನ್ನು ತರಿಸಬೇಕು ಎಂದು ಒಡಿಶಾದ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ಮನವಿ ಮಾಡಿದೆ.

ಇದೀಗ ಪ್ರಿನ್ಸ್ ಚಾರ್ಲ್ಸ್ ಅಧಿಕಾರ ವಹಿಸಿಕೊಂಡಿದ್ದಾರೆ. ನಿಯಮಗಳ ಪ್ರಕಾರ ಅವರ ಪತ್ನಿ ಕಾರ್ನ್‌ವಾಲ್ ಕ್ಯಾಮಿಲ್ಲಾ ಅವರು ವಜ್ರ ಧರಿಸಲಿದ್ದಾರೆ. 21.6 ಗ್ರಾಂ ತೂಕ ಇರುವ ಈ ವಜ್ರ ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ವಜ್ರ ಎಂದು ಪರಿಗಣಿಸಲಾಗಿತ್ತು.

ಕೊಹಿನೂರ್ ವಜ್ರವನ್ನು ಮಹಾರಾಜ ರಂಜಿತ್ ಸಿಂಗ್ ಅವರು ಜಗನ್ನಾಥ ದೇವರಿಗೆ ದಾನ ನೀಡಿದ್ದರು. ಆದರೆ ಅದು ಇಂಗ್ಲೆಂಡ್ ರಾಣಿ ಬಳಿ ಇತ್ತು. ಇದೀಗ ಅದನ್ನು ವಾಪಾಸು ಪಡೆಯಿರಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!