ಯುದ್ಧ ಮಾಡುವ ಸಸ್ಯವನ್ನು ಎಂದಾದರೂ ನೋಡಿದ್ದೀರಾ?? ಇಲ್ಲಿ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಸ್ಯಗಳು ತುಂಬಾ ಸಾತ್ವಿಕ ಸ್ವಭಾದವು ಬಣ್ಣಬಣ್ಣದ ಹೂಗಳು ಮತ್ತು ಹಣ್ಣುಗಳಿಂದ ಎಲ್ಲರ ಮನಸೂರೆಗೊಳಿಸುತ್ತವೆ. ಮುಟ್ಟಿದರೆ ಮುನಿ ಸಸ್ಯ (ಶೇಮ್‌ಪ್ಲಾಂಟ್) ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ತನ್ನನ್ನು  ಮುಟ್ಟಿದರೆ  ಶತ್ರುಗಳೊಂದಿಗೆ ಹೋರಾಡುವ ಸಸ್ಯದ ಬಗ್ಗೆ ನಿಮಗೆ ತಿಳಿದಿದೆಯೇ?..

ʻವುಡ್‌ ಸೋರೆಲ್‌ʼ ಎಂಬ ಸಸ್ಯವನ್ನು ಮುಟ್ಟಿದರೆ ಅಷ್ಟೇ ಕತೆ. ಆ ಸಸ್ಯದೊಂದಿಗಿನ ಹೋರಾಟದಲ್ಲಿ ಅದರಿಂದ ಹೊರಬರುವುದು ಬಾಂಬುಗಳಲ್ಲ ಒಂದೇ ಸಲ ಮಿಸೈಲ್‌ಗಳನ್ನು ಹಾರಿಸುತ್ತದೆ. ಯಾರಾದರೂ ಆ ಗಿಡವನ್ನು ಮುಟ್ಟಿದರೆ ಸಾಕು ಸಸ್ಯವು ಅವರ ಹಿಡಿತದಿಂದ ತನ್ನನ್ನು ರಕ್ಷಿಸಿಕೊಳ್ಳಲು ಕ್ಷಿಪಣಿಗಳ ಪ್ರಯೋಗ ಮಾಡುತ್ತದೆ..!

ಇಲ್ಲಿ ಕ್ಷಿಪಣಿಗಳು ಎಂದರೆ ಆ ಸಸ್ಯದ ʻಬೀಜʼ(Sowing Seed). ʻವುಡ್‌ ಸೋರೆಲ್‌ʼ ಕಾಯಿಗಳು ನೋಡಲು ಅಕೇಶಿಯಾದಂತೆ ಇರುತ್ತವೆ. ಯಾರಾದರೂ ಅದನ್ನು ಮುಟ್ಟಿದರೆ ಸಾಕು ಒಮ್ಮೆಲೆ ಸಾಲು ಸಾಲಾಗಿ ಸಸ್ಯದ ಬೀಜಗಳನ್ನು ಹೊರ ಚೆಲ್ಲುತ್ತದೆ. ಸುಮಾರು ನಾಲ್ಕು ಮೀಟರ್ ದೂರದವರೆಗೂ ಸಸ್ಯದ ಬೀಜಗಳು ಹಾರುತ್ತವೆ. ಈ ಬೀಜಗಳಿಂದ  ಮನುಷ್ಯರಿಗೆ ಯಾವುದೇ ರೀತಿಯ ನೋವಾಗುವುದಿಲ್ಲ ಆದರೆ ಸಣ್ಣ ಕೀಟಗಳಿಗೆ ತೊಂದರೆ ಉಂಟಾಗುತ್ತದೆ.

ಒಡಿಶಾದ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಈ ಯುದ್ಧ ಸಸ್ಯದ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಈ ತಳಿಯ ಸಸ್ಯವು ಬ್ರೆಜಿಲ್, ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಸಸ್ಯವು ಭಾರತದ ಕೆಲವು ಕಂಡುಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!