ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರು ಇಂದು ಶುಕ್ರವಾರ ಸಂಜೆ ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡು ಕರ್ತವ್ಯಕ್ಕೆ ಮರಳಿದ್ದಾರೆ.
ನಾಳೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೇವೆಗಳನ್ನು ಪುನರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
42 ದಿನಗಳ ಕಾಲ ನಡೆಸಿದ್ದ ಮುಷ್ಕರವನ್ನು ಇಂದು ಕೊನೆಗೊಳಿಸಿದ್ದು, ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಯಿಂದ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಕೇಂದ್ರೀಯ ತನಿಖಾ ದಳ (CBI) ಕಚೇರಿಗೆ ಮೆರವಣಿಗೆ ನಡೆಸಿದ ನಂತರ ವೈದ್ಯರು ಮುಷ್ಕರ ಹಿಂತೆಗೆದುಕೊಂಡಿದ್ದಾರೆ.
‘ಸ್ವಾಸ್ಥ್ಯ ಭವನ’ದಿಂದ ಸಿಜಿಒ ಕಾಂಪ್ಲೆಕ್ಸ್‌ವರೆಗೆ ಸುಮಾರು 4 ಕಿ.ಮೀ ದೂರವನ್ನು ಮೆರವಣಿಗೆ ಸಾಗಿದರು. ವೈದ್ಯರು ಹೊರರೋಗಿ ವಿಭಾಗದಲ್ಲಿ (OPD) ಕೆಲಸ ಮಾಡುವುದಿಲ್ಲ . ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ನಾಳೆಯಿಂದ ಭಾಗಶಃ ಕಾರ್ಯನಿರ್ವಹಿಸುತ್ತಾರೆ.