ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 91 ಮಂದಿಗೆ ಕೋವಿಡ್ ಸೋಂಕು

ಹೊಸದಿಗಂತ ವರದಿ,ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ (ಫೆ.11) 91 ಮಂದಿಗೆ ಕೋವಿಡ್ ಸೋಂಕು ದೃಢ ಪಟ್ಟಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದೇ ವೇಳೆ 266 ಮಂದಿ ಬುಧವಾರ ಸೋಂಕು ಮುಕ್ತರಾಗಿದ್ದಾರೆ. ಈ ತನಕ ಜಿಲ್ಲೆಯಲ್ಲಿ 1,32,061 ಸೋಂಕಿನಿಂದ ಹೊರ ಬಂದಿದ್ದಾರೆ.
ಶುಕ್ರವಾರ 6 ಸಾವು ಸಂಭವಿಸಿದೆ. ಇದರಲ್ಲಿ ನಾಲ್ವರು ಹೊರ ಜಿಲ್ಲೆಯವರು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,819 ಕೋವಿಡ್ ಸಾವು ಸಂಭವಿಸಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡದಲ್ಲಿ 962 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇ.1.79 ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!