Saturday, October 1, 2022

Latest Posts

ಸ್ಟಾರ್ ಹೀರೋಗಾಗಿ ಕೃತಿ ಶೆಟ್ಟಿ ಬೋಲ್ಡ್‌ ಡಿಸಿಷನ್: ವಾರ್ನಿಂಗ್ ಕೊಟ್ಟ ಮತ್ತೊಬ್ಬ ಹೀರೋ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಬೇಬಮ್ಮ ಕನ್ನಡತಿ(ಕೃತಿ ಶೆಟ್ಟಿ) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿರಂಗಕ್ಕೆ ಕಾಲಿಟ್ಟಿದ್ದೇ ತಡ ಅದೃಷ್ಟ ಹಿಂದೆಯೇ ಹೊತ್ಕೊಂಡ್‌ ಬಂದಿದೆ. ಮೊದಲ ಸಿನಿಮಾನೇ ದೊಡ್ಡ ಹಿಟ್‌ ಕೊಟ್ಟಿದೆ. ನಂತರ ಸಾಲು ಸಾಲು ಹಿಟ್ ಗಳ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ಈ ಚೆಲುವೆ ಇದೀಗ ಕೊಂಚ ಹಿಂದೆ ಬಿದ್ದಿದ್ದಾರೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳಿಂದಾಗಿ ಕೃತಿ ಶೆಟ್ಟಿ ತಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸುತ್ತಿದ್ದಾರೆ. ಈ ಬಾರಿ ಪ್ರೇಕ್ಷಕರನ್ನು ಮೆಚ್ಚಿಸಲು ಬೋಲ್ಡ್‌ ಡಿಸಿಷನ್‌ ತೆಗೆದುಕೊಡಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಕೃತಿ ಶೆಟ್ಟಿ ತಮಿಳಿನ ಸ್ಟಾರ್ ಹೀರೋ ಸೂರ್ಯ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಅವರ ಪಾತ್ರ ಗ್ಲಾಮರಸ್ ಆಗಿರುವುದರಿಂದ ಲಿಪ್‌ಲಾಕ್ ದೃಶ್ಯವೂ ಇದೆಯಂತೆ. ಇದುವರೆಗೂ ಲಿಪ್‌ಲಾಕ್ ಸೀನ್ ಮಾಡದ ಕೃತಿ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದ ಮತ್ತೊಬ್ಬ ಯುವ ಸ್ಟಾರ್ ಹೀರೋ ಆಕೆಗೆ ವಾರ್ನಿಂಗ್ ಕೊಟ್ಟಿದ್ದಾರಂತೆ.

ಟಾಲಿವುಡ್‌ನ ಯಂಗ್ ಹೀರೋ ಕೃತಿಗೆ ತುಂಬಾ ಹತ್ತಿರವಾಗಿದ್ದಾರೆ. ಸೀನಿಯರ್ ಹೀರೋಗಳ ಜೊತೆ ಲಿಪ್‌ಲಾಕ್‌ನಂತಹ ದೃಶ್ಯಗಳನ್ನು ಮಾಡಿದರೆ ಕೆರಿಯರ್‌ ಮುಂದೆ ಸಾಗುವುದು ಕಷ್ಟ ಎಂದು ಸಲಹೆ ನೀಡಿದ್ದಾರೆಂಬುದು ಟಾಕ್. ಆದರೆ ಈ ಸುದ್ದಿ ಎಷ್ಟರಮಟ್ಟಿಗೆ ಸತ್ಯ ಕೃತಿ ಶೆಟ್ಟಿ ನಿರ್ಧಾರದ ಬಗ್ಗೆ ವಾರ್ನಿಂಗ್ ಕೊಟ್ಟ ಹೀರೋ ಯಾರು ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಮೂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!