ಗೋದಾಮಿನಿಂದ 17 ಲಕ್ಷ ಮೌಲ್ಯದ ಚಾಕಲೇಟ್‌ ಕದ್ದ ಖದೀಮರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚಾಕ್ಲೇಟ್‌ ಸಂಗ್ರಹಿಸುವ ಗೋದಾಮಿಗೆ ಕನ್ನ ಹಾಕಿದ ದುಷ್ಕರ್ಮಿಗಳು ಸುಮಾರು 17 ಲಕ್ಷ ಮೌಲ್ಯದ ಚಾಕಲೇಟ್‌ ಗಳನ್ನು ಹೊತ್ತೊಯ್ದಿದ್ದಾರೆ. ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಜನಪ್ರಿಯ ಚಾಕ್ಲೆಟ್‌ ಬ್ರ್ಯಾಂಡ್‌ ನ ಸುಮಾರು 150 ಪೆಟ್ಟಿಗೆಗಳನ್ನು ಕಳುವು ಮಾಡಿದ್ದಾರೆ.

ಲಕ್ನೋ ನಗರದ ಬಹುರಾಷ್ಟ್ರೀಯ ಚಾಕೊಲೇಟ್ ಬ್ರಾಂಡ್‌ನ ವಿತರಕರಾಗಿರುವ ಉದ್ಯಮಿ ರಾಜೇಂದ್ರ ಸಿಂಗ್ ಸಿದ್ಧು ಅವರ ಗೋದಾಮಿನಲ್ಲಿ ಈ ದುಷ್ಕೃತ್ಯ ನಡೆದಿದೆ. ಇತ್ತೀಚೆಗಷ್ಟೇ ಚಾಕ್ಲೆಟ್‌ ವಿತರಕರಾದ ರಾಜೇಂದ್ರ ಸಿಂಗ್ ಸಿದ್ಧು ತಮ್ಮ ಹೊಸ ಅಪಾರ್ಟ್ಮೆಂಟ್‌ ಗೆ ಸ್ಥಳಾಂತರ ಗೊಂಡಿದ್ದರು. ಈ ಹಿನ್ನಲೆಯಲ್ಲಿ ಅವರ ಹಳೆಯ ಮನೆಯನ್ನು ಗೊದಾಮಿನ ಥರಹ ಬಳಸ ತೊಡಗಿದ್ದರು.

ಪ್ರಸ್ತುತ ಅವರ ಗೋದಾಮಿನಲ್ಲಿ ಕಳ್ಳತನ ನಡೆದಿದೆ. ಮನೆಯ ಬಾಗಿಲು ಮುರಿದು ಬಿದ್ದಿರುವುದಾಗಿ ನೆರೆಹೊರೆಯವರಿಂದ ಫೋನ್‌ ಸ್ವೀಕರಿಸಿದ ಬಳಿಕ ಬಂದು ನೋಡಿದರೆ ಇಡೀ ಗೋಡೌನ್ ಖಾಲಿಯಾಗಿರುವುದು ಕಂಡು ಬಂತು. ಕಳ್ಳರು ಸಿಸಿಟಿವಿಗಳ ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಪೋಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳ್ಳರು ಅವರ ಮನೆಯ ಬಾಗಿಲು ಮುರಿದು ಅಲ್ಲಿರುವ 17 ಲಕ್ಷ ಮೌಲ್ಯದ 150 ಬಾಕ್ಸ್‌ ಗಳಲ್ಲಿದ್ದ ಚಾಕ್ಲೆಟ್‌ ಗಳನ್ನೂ ಹಾಗೂ ಕೆಲ ಬಾಕ್ಸ್‌ ಬಿಸ್ಕೀಟ್‌ ಗಳನ್ನೂ ಹೊತ್ತೊಯ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!