ಮಹಿಳೆಯರ ಗುಣವೇ ಅಷ್ಟು, ಮಾಡೋದು ಮಾಡೋದೇ ಆದರೆ ರೆಗ್ರೆಟ್ ಮಾಡೋದು ಮಾಮೂಲು ಅಭ್ಯಾಸ. ಕೆಲವೊಮ್ಮೆ ಇದು ಒಳ್ಳೆಯದು ಆದರೆ ಕೆಲವೊಮ್ಮೆ ಸರಿಯಲ್ಲ.ನಿಮ್ಮ ಹೆಮ್ಮೆಯ ವಿಷಯಗಳಿಗೆ ಗಿಲ್ಟ್ ಮಾಡಿಕೊಳ್ಳುತ್ತಾ ಹೋಗುವ ಅಭ್ಯಾಸ ಹೆಚ್ಚಾಗುತ್ತಿದ್ದಂತೆಯೇ ನಿಮ್ಮನ್ನು ನೀವು ಕಳೆದುಕೊಳ್ಳುತ್ತೀರಿ ಎಚ್ಚರ!
- ಪತಿ/ಬಾಯ್ಫ್ರೆಂಡ್ಗಿಂತ ಹೆಚ್ಚು ಟ್ಯಾಲೆಂಟೆಡ್ ನೀವಾಗಿದ್ರೆ, ಅವರಿಗಿಂತ ಸಂಬಳ ಹೆಚ್ಚು ನಿಮ್ಮದಾಗಿದ್ರೆ ಕೊರಗೋ ಅವಶ್ಯಕತೆ ಇಲ್ಲ.
- ಮಹಿಳೆಯರಿಗೆ ಯೋಚನಾ ಶಕ್ತಿ ಜಾಸ್ತಿ, ನೀವು ನೀಡಿದ ವಾರ್ನಿಂಗ್ ಸರಿಯಾದಾಗ ಕೆಟ್ಟದಾಗುತ್ತೆ ಎಂದು ನಾನು ಹೇಳಿದ್ದೆ ಹಾಗೇ ಆಯ್ತು ಎಂದು ಬೇಸರಿಸಿಕೊಳ್ಳೋದು ಬೇಡ.
- ಬ್ಯುಸಿಯಾಗಿದ್ದರೂ ಶಾಪಿಂಗ್, ಸ್ಕಿನ್ಕೇರ್ಗೆ ದಿನದ 10 ನಿಮಿಷ ಕೊಟ್ಟಾಗ, ನಾನು ಟೈಮ್ ವೇಸ್ಟ್ ಮಾಡ್ತೀದ್ದೀನಾ ಅನ್ನೋ ಗಿಲ್ಟ್ ಕಿತ್ತೆಸೆಯಿರಿ.
- ಅಡುಗೆ ಮಾಡೋದಕ್ಕೆ ಬರೋದಿಲ್ಲ. ಸರಿ ಈಗೇನಾಯ್ತು? ಭೂಮಿ ಮೇಲೆ ಎಷ್ಟೋ ಜನರಿಗೆ ಅಡುಗೆ ಗೊತ್ತಿಲ್ಲ, ಇದಕ್ಕೆ ನಿಮ್ಮನ್ನು ನೀವು ದೂಷಿಸೋದು ತಪ್ಪು.
- ಬಾಯ್ಫ್ರೆಂಡ್ ಅಥವಾ ಪತಿ ನಿಮ್ಮಿಂದ ದೂರಾದಾಗ, ನಾನೇ ಏನೋ ತಪ್ಪು ಮಾಡಿದ್ದೇನೆ, ಅವನನ್ನು ಖುಷಿಯಾಗಿ ನೋಡಿಕೊಳ್ಳೋದರಲ್ಲಿ ನಾನೇ ಸೋತಿದ್ದೇನೆ ಎನ್ನುವ ಭಾವನೆ ಬೇಡ.
- ಗಂಟೆಗಟ್ಟಲೆ ಸ್ನಾನ, ಮೇಕಪ್ಗೆ ಸಮಯ, ಬಟ್ಟೆ ಆರಿಸೋಕೆ ಹೆಚ್ಚು ಸಮಯ, ನಿಧಾನವಾಗಿ ತಿನ್ನೋ ಅಭ್ಯಾಸ ಇದ್ಯಾವುದಕ್ಕೂ ಗಿಲ್ಟ್ ಬೇಡ, Be you the world will adjust ಅನ್ನೋ ಮಾತನ್ನು ಕೇಳಿಲ್ವಾ?
- ನಾನು ಹುಡುಗಿ ಗಂಡ ಅಥವಾ ಮನೆಯವರು ಫೋನ್ ಮಾಡಿದಾಗ ತಕ್ಷಣ ಎತ್ತಬೇಕು, ಅವರು ತಪ್ಪು ತಿಳ್ಕೋತಾರೆ ಅನ್ನೋ ಭಾವನೆ ಯೂಸ್ಲೆಸ್!
- ನಿಮ್ಮ ಮನೆಯನ್ನು ಸದಾ ಶುಚಿಯಾಗಿಟ್ಟುಕೊಳ್ಳೋಕೆ ಆಗದೇ ಇರಬಹುದು, ಕೆಲವೊಮ್ಮೆ ಇದು ಕಾಮನ್. ನೀವು ಮನುಷ್ಯ ತಾನೆ, ಮನೆ ಕ್ಲೀನಿಂಗ್ ಬರೀ ನಿಮ್ಮ ಜವಾಬ್ದಾರಿ ಅಲ್ಲ ಅನ್ನೋದು ನೆನಪಿರಲಿ.
- ನಾನು ನೋಡೋ ಫಿಲಂ, ಓದೋ ಬುಕ್, ಕೇಳೋ ಹಾಡು ಬೇರೆಯವರಿಗೆ ಇಷ್ಟ ಆಗೋದಿಲ್ವೇನೋ ಅಂತ ಅವರಿಗಿಷ್ಟದ, ನಿಮಗಿಷ್ಟ ಇಲ್ಲದ ಸಿನಿಮಾ ನೋಡೋದು ಬೇಡ.
- ಭಾವನೆಗಳನ್ನು ಬಾಯ್ಬಿಟ್ಟು ಹೇಳೋದಕ್ಕೆ ಬೇಜಾರೇ ಬೇಡ, ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗೋ ಬದಲು ಹೊರಹಾಕಿದ್ದೀರಿ, ಎದುರಿನವರಿಗೆ ಸ್ವಲ್ಪ ನೋವಾಗಿದ್ರೂ ರಿಯಾಲಿಟಿ ಅರ್ಥ ಆಯ್ತಾ ಯೋಚಿಸಿ.
- ನೀವು ಸಿಂಗಲ್ ಆಗಿದ್ದೀರಾ? ಡೇಟಿಂಗ್ನಲ್ಲಿದ್ದೀರಾ? ಲಿವ್ ಇನ್ನಲ್ಲಿದ್ದೀರಾ? ಮದುವೆಯಾಗಿದ್ದೀರಾ? ಡಿವೋರ್ಸ್ ಕೊಡ್ತಾ ಇದ್ದೀರಾ? ಗಂಡನಿಂದ ಹಾಗೇ ದೂರಾಗಿದ್ದೀರಾ? ಮರುಮದುವೆ ಆಗ್ತಿದ್ದೀರಾ? ಎಲ್ಲವೂ ನಿಮ್ಮ ಖಾಸಗಿ ವಿಷಯ ಗಿಲ್ಟ್ ಯಾಕೆ?
- ಸ್ವಲ್ಪ ಟೀ ಮಾಡ್ಕೊಂಡ್ ಬಾ, ಸುಸ್ತಾಗಿದ್ರೂ ಎದ್ದು ಹೋಗಿ ಟೀ ಮಾಡ್ತೀರಾ? ಸುಸ್ತಾಗಿದೆ ಸ್ವಲ್ಪ ಹೊತ್ತು ಬಿಟ್ಟು ಮಾಡ್ತೀನಿ ಅಥವಾ ನೀವೇ ಮಾಡೋಕೆ ಆಗತ್ತಾ ಕೇಳೋದಕ್ಕೆ ದುಃಖ ಯಾಕೆ? ನೋ ಅನ್ನೋದನ್ನು ಕಲಿಯಿರಿ.
- ತುಂಬಾ ದಪ್ಪ ಆಗಿದ್ಯಾ, ಸಣ್ಣ ಆಗಬೇಕು ನೀನು..
ನಿಮ್ಮ ದೇಹ ನಿಮ್ಮ ಇಷ್ಟ, ಆರೋಗ್ಯ ಕಾಪಾಡಿಕೊಂಡರೆ ಸಾಕು, ನಿಮ್ಮ ದೇಹವನ್ನು ಇರುವಂತೆಯೇ ಪ್ರೀತಿಸಿ.