ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಪಾತಿ, ರೊಟ್ಟಿ, ದೋಸೆ ಎಲ್ಲದಕ್ಕೂ ಸಾಮಾನ್ಯವಾಗಿ ಚಟ್ನಿ ಅಥವಾ ಪಲ್ಯ ಮಾಡುವುದು ರೂಢಿ. ತೆಂಗಿನಕಾಯಿ ಚಟ್ನಿ, ಕಡಲೆ ಬೀಜದ ಚಟ್ನಿ ತಿಂದಿರುತ್ತೀರಿ. ಆದರೆ ಬೆಂಡೇಕಾಯಿ ಚಟ್ನಿ ತಿಂದಿದ್ದೀರಾ..? ಅಂಟಿಲ್ಲದೆ ರುಚಿ ರುಚಿಯಾಗಿ ಬೆಂಡೇಕಾಯಿ ಚಟ್ನಿ ಹೇಗೆ ಮಾಡೋದು ಅನ್ನೋದನ್ನ ನೋಡಿ.
ಬೇಕಾಗುವ ಸಾಮಾಗ್ರಿಗಳು
10-15ಬೆಂಡೆಕಾಯಿ
2-4 ಬೆಳ್ಳುಳ್ಳಿ ಸಿಪ್ಪೆ
ಹುಣಸೆ ಹಣ್ಣು
ಮೆಣಸಿನಕಾಯಿ ಖಾರಕ್ಕೆ ತಕ್ಕಷ್ಟು
ಸ್ವಲ್ಪ ಕೊಬ್ಬರಿ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಬೆಲ್ಲ
ಮಾಡುವ ವಿಧಾನ
ಮೊದಲು ಬೆಂಡೆಕಾಯಿಯನ್ನು ಬಾಣಲೆಯಲ್ಲಿ ಎಣ್ಣೆ ಹಾಕಿ ಅಂಟಿನ ಅಂಶ ಹೋಗುವವರೆಗೆ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ಉಳಿದ ತೆಂಗಿನ ತುರಿ, ಬೆಳ್ಳುಳ್ಳಿ, ಹುಣಸೆ ಹಣ್ಣು, ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಬೇಕು. ಬಳಿಕ ಬೆಂಡೆಕಾಯಿ ಹಾಕಿ ನುಣ್ಣಗೆ ರುಬ್ಬಿದರೆ ಬೆಂಡೆಕಾಯಿ ಚಟ್ನಿ ಸಿದ್ಧ.