ಉದ್ಯೋಗ ನೀಡುವುದಾಗಿ ಲಕ್ಷಾಂತರ ವಂಚನೆ: ದೂರು ದಾಖಲು

ಹೊಸದಿಗಂತ ವರದಿ,ಉಡುಪಿ:

ಪಾರ್ಟ್ ಟೈಮ್ ಟ್ರೇಡಿಂಗ್ ನ ಉದ್ಯೋಗ ಎಂದು ನಂಬಿಸಿ, ಯುವಕರಿಂದ ಗೂಗಲ್ ಪೇ ಮುಖಾಂತರ ಹಣ ಪಾವತಿಸಿಕೊಂಡು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.29 ರಂದು ಭರತ್ ಎಂಬವರ ಮೊಬೈಲ್ ಗೆ ಅಪರಿಚಿತ ವ್ಯಕ್ತಿಯ ಮೊಬೈಲ್ ನಿಂದ ಪಾರ್ಟ್ ಟೈಮ್ ಕೆಲಸದ ಬಗ್ಗೆ ಲಿಂಕ್ ಒಂದನ್ನು ಹಾಕಿ ಸಂದೇಶ ಕಳುಹಿಸಿದ್ದು, ಲಿಂಕ್ ನ್ನು ಕ್ಲಿಕ್ ಮಾಡಿದಾಗ Adrian Co ಎಂಬವರ ಹೆಸರಿನಲ್ಲಿ ವಾಟ್ಸ್ ಅಫ್ ಖಾತೆ ಓಪನ್ ಆಗಿದೆ.ಈ ಖಾತೆಯಲ್ಲಿ ಬಂದ ಲಿಂಕ್ ಗೆ ಭರತ್ ಲಾಗಿನ್ ಆದಾಗ ವೆಬ್ ಸೈಟ್ ಓಪನ್ ಆಗಿ Trading ಎಂಬ ಸಂಸ್ಥೆ ಓಪನ್ ಆಗಿದೆ . ಅಲ್ಲಿ ಭರತ್ ರಿಜಿಸ್ಟರ್ ಮಾಡಿದಾಗ ವ್ಯಾಲೆಟ್ ಕ್ರಿಯೆಟ್ ಆಗಿದೆ. ಬಳಿಕ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಭರತ್ ನ.29 ರಂದು ರೂ.964 ಹಣವನ್ನು ಹಾಕಿದ್ದು, ನಂತರ ಅದೇ ದಿನ 1,330 ಹಣ ವಾಪಾಸ್ಸು ಬಂದಿದೆ. ಇದನ್ನು ನಂಬಿದ ಭರತ್ ನ. 30 ರಂದು ತನ್ನ ಗೂಗಲ್ ಪೇ ಮೂಖಾಂತರ ಹಂತ ಹಂತ ವಾಗಿ ಒಟ್ಟು ರೂ. 84, 630 ಹಾಗೂ ತನ್ನ ಸ್ನೇಹಿತ ಮನೋಜ್ ರವರಿಂದ 17,040 ಹಣವನ್ನು ಕಳುಹಿಸಿದ್ದಾನೆ. ಈ ಈ ರೀತಿ ಒಟ್ಟು ರೂ. 1,01,670 ಹಣವನ್ನು ಪಾವತಿಸಿದ್ದಾನೆ. ಆದರೆ ಹಣ ಬರಲೇ ಇಲ್ಲ.
ಇದರಿಂದ ಭರತ್ ಮೋಸ ಹೋಗಿದ್ದು, ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!