ನಿಮ್ಮ ಮಕ್ಕಳಿಗೆ ಗನ್, ಬಾಂಬ್ ಹೆಸರಿಡಿ: ಉತ್ತರ ಕೊರಿಯಾ ಸರ್ವಾಧಿಕಾರಿಯ ಆದೇಶಕ್ಕೆ ಜನತೆ ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಾನಾ ಆದೇಶಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಒಂದು ಒಂದು ಸಲ ಅವರ ಆದೇಶ ಅಲ್ಲಿನ ಜನರಿಗೆ ಭಯವನ್ನು ಹುಟ್ಟಿಸುತ್ತದೆ.

ಇದೀಗ ಉತ್ತರ ಕೊರಿಯ ಸರ್ಕಾರ ಮತ್ತೊಂದು ತೀರ್ಮಾನ ಕೈಗೊಂಡಿದ್ದು, ಈ ಆದೇಶ ಅಚ್ಚರಿಯ ಜೊತೆಗೆ ನಗು ತರಿಸುವಂತಿದೆ. ಅದೇನೆಂದರೆ ಯುವ ಪೀಳಿಗೆಯಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಸಲುವಾಗಿ ಪೋಷಕರು ತಮ್ಮ ಮಕ್ಕಳಿಗೆ ಗನ್, ಬಾಂಬ್, ಸೆಟಲೈಟ್, ನಿಷ್ಠೆ ಈ ತರಹದ ಹೆಸರುಗಳನ್ನು ಇಡಬೇಕೆಂದು ಆದೇಶಿಸಲಾಗಿದೆ.

ಈ ಮೊದಲು A Ri ಮತ್ತು Su Mi ಯಿಂದ ಕೊನೆಯಾಗುವ ಹೆಸರುಗಳನ್ನು ಇಡಬೇಕೆಂದು ತಿಳಿಸಲಾಗಿತ್ತು. ಆದರೆ ಇವುಗಳು ಸೌಮ್ಯವಾಗಿವೆ ಎಂಬ ಕಾರಣಕ್ಕೆ ಮಕ್ಕಳಲ್ಲಿ ಬಾಲ್ಯದಿಂದಲೇ ಮಿಲಿಟರಿ ಗುಣಗಳು ಬರಲಿ ಎಂಬ ಕಾರಣಕ್ಕೆ ಈಗ Chong II (ಗನ್), Chung Sim (ನಿಷ್ಠೆ),, Pok II (ಬಾಂಬ್) ಮೊದಲಾದವುಗಳಿಂದ ಕೊನೆಯಾಗುವಂತೆ ಹೆಸರುಗಳನ್ನು ಇಡಬೇಕಿದೆ.

ಇದರ ಜೊತೆಗೆ ಪೋಷಕರು, ತಮ್ಮ ಮಕ್ಕಳಿಗೆ ಚೈನಿಸ್, ಜಪಾನೀಸ್ ಹಾಗೂ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾಗೆ ಸಂಬಂಧಪಟ್ಟವರಿಗೆ ಇರಬಾರದು ಎಂದು ತಿಳಿಸಲಾಗಿದೆ. ಸರ್ಕಾರದ ಈ ಆದೇಶ ಮಕ್ಕಳ ಪೋಷಕರಲ್ಲಿ ಆಕ್ರೋಶ ಉಂಟು ಮಾಡಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!