November 18, 2026
Wednesday, November 18, 2026
spot_img

ನ.27ಕ್ಕೆ ‘ಲಕ್ಷ್ಮೀ ಪುತ್ರ’ ರಿಲೀಸ್: ರಾಜ್ಯಾದ್ಯಂತ 120 ಚಿತ್ರಮಂದಿರಗಳಲ್ಲಿ ಚಿಕ್ಕಣ್ಣ ಸಿನಿಮಾ ಬಿಡುಗಡೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಹಾಸ್ಯ ನಟ ಚಿಕ್ಕಣ್ಣ ನಟನೆಯ ಲಕ್ಷ್ಮೀ ಪುತ್ರ ಸಿನಿಮಾ ರಾಜ್ಯಾದ್ಯಂತ 120 ಸಿನಿಮಾ ಮಂದಿರಗಳಲ್ಲಿ ನ. 27 ರಂದು ಬಿಡುಗಡೆಯಾಗಲಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಚಿಕ್ಕಣ್ಣ, ಲಕ್ಷ್ಮೀಪುತ್ರ ಸಿನಿಮಾ ತಾಯಿ-ಮಗನ ಬಾಂಧವ್ಯ ಹಾಗೂ ಕುಟುಂಬಾಧಾರಿತ ಸಿನಿಮಾ ಆಗಿದೆ. ಉಪಾಧ್ಯಕ್ಷ ಸಿನಿಮಾ ನಂತರ ನಾಯಕ ನಟನಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಆಗಿದೆ. ಉಪಾಧ್ಯಕ್ಷ ಸಿನಿಮಾ ಮಾಡಿದಾಗ ಚಿತ್ರದಲ್ಲಿ ಸ್ವಲ್ಪ ಕುಟುಂಬಕ್ಕೆ ಸಂಬಂಧಿಸಿ ದೃಶ್ಯಗಳಿದ್ದವು. ಪ್ರೇಕ್ಷರು ಅದನ್ನು ಇಷ್ಟ ಪಟ್ಟಿದ್ದರು. ಆದ ಕಾರಣ ವಿಜಯ ಎಸ್. ಸ್ವಾಮಿ ಲಕ್ಷ್ಮೀ ಪುತ್ರ ಕಥೆ ಹೇಳಿದಾಗ ನನಗೆ ಇಷ್ಟವಾಗಿದ್ದು, ನಟನೆಗೆ ಒಪ್ಪಿಕೊಂಡೆ ಎಂದರು.

ನಿರ್ಮಾಪಕರಾದ ಅನ್ನಪೂರ್ಣ ಅರ್ಜುನ್ ಮಾತನಾಡಿ, ಸಿನಿಮಾ ನನ್ನ ಪತಿ ಎ.ಪಿ. ಅರ್ಜುನ್ ನಿರ್ದೇಶನ ಮಾಡಿದ್ದಾರೆ. ವಿಜಯ್‌ಸ್ವಾಮಿ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಚಿಕ್ಕಣ್ಣಗೆ ಜೋಡಿಯಾಗಿ ವಂದಿತಾ ಗೌಡ ನಟಿಸಿದ್ದಾರೆ. ಸಹ ನಿರ್ಮಾಪಕರಾಗಿ ರವಿಕಿರಣ ನಿರ್ವಹಿಸಿದ್ದಾರೆ. ಹಿರಿಯ ನಟಿ ತಾರಾ, ಕುರಿ ಪ್ರತಾಪ್, ಧರ್ಮಣ್ಣ, ಅನಂತಪದ್ಮನಾಭ ಸೇರಿದಂತೆ ದೊಡ್ಡ ತಾರಗಣವಿದೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ಎ.ಪಿ. ಅರ್ಜುನ್ ಸಾಹಿತ್ಯ ಬರೆದಿದ್ದಾರೆ. ಗಿರೀಶ್ ಆರ್. ಗೌಡ ಛಾಯಾಚಿತ್ರಗ್ರಹಣ ಸಿನಿಮಾಗಿದೆ ಎಂದರು.

ಪರಭಾಷೆ ಸಿನಿಮಾಗಳಿಂದ ಕನ್ನಡ ಸಿನಿಮಾಗಳು ಪ್ರೇಕ್ಷಕರಿಗೆ ತಲುಪುತ್ತಿಲ್ಲ. ಅವುಗಳಂತೆ ಕನ್ನಡ ಸಿನಿಮಾವನ್ನು ಎಲ್ಲರೂ ನೋಡಬೇಕು. ಲಕ್ಷ್ಮೀ ಪುತ್ರ ಒಳ್ಳೆಯ ಕಥೆಯುಳ್ಳ ಸಿನಿಮಾ ಆಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ನಟ ಧರ್ಮಣ್ಣ ಮಾತನಾಡಿ, ನಟ ಚಿಕ್ಕಣ್ಣ ಕಾಮಿಡಿ ನಟನೆಯ ಮೂಲಕ ಪ್ರಸಿದ್ಧರಾಗಿದ್ದಾರೆ. ಈಗ ಲಕ್ಷ್ಮೀಪುತ್ರ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಭಾವನಾತ್ಮಕ ಸನ್ನಿವೇಶಗಳಲ್ಲಿ ಕಂಡು ಬಂದಿದ್ದು, ಪರಿಪೂರ್ಣವಾಗಿ ತೊಡಗಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಮಂಡ್ಯ, ಮೈಸೂರ, ಚಿತ್ರದುರ್ಗ, ವಾರಣಾಸಿ ಸೇರಿದಂತೆ ಅನೇಕ ಕಡೆ ಚಿತ್ರೀಕರಣವಾಗಿದೆ. ಈಚೆಗೆ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಈ ವೇಳೆ ನಟಿ ವಂದಿತಾ ಗೌಡ, ಮನೋಹರ, ಅನಂತ ಪದ್ಮನಾಭ ಹಾಗೂ ಶಿವಾನಂದ ಮುತ್ತಣ್ಣವರ ಇದ್ದರು.

Must Read