ಕೆಜಿಎಫ್-2 ಜತೆಗಿನ ರೇಸ್‌ನಿಂದ ಹಿಂದೆ ಸರಿದ ಆಮಿರ್‌ ಖಾನ್‌ ನಟನೆಯ ‘ಲಾಲ್‌ ಸಿಂಗ್‌ ಛಡ್ಡಾ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಬಳಿಕ ಕೆ.ಜಿಎಫ್‌ ಹಾಗೂ ಲಾಲ್‌ ಸಿಂಗ್‌ ಛಡ್ಡಾ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿತ್ತು.
ನಟ ಯಶ್‌ ನಟನೆಯ ಕೆಜಿಎಫ್‌ 2 ಹಾಗೂ ನಟ ಆಮಿರ್‌ ಖಾನ್‌ ನಟನೆಯ ಲಾಲ್‌ ಸಿಂಗ್‌ ಛಡ್ಡಾ ಬಿಡುಗಡೆಗೆ ಸಜ್ಜಾಗಿವೆ. ಏ.14 ಒಂದೇ ದಿನ ಚಿತ್ರದ ರಿಲೀಸ್‌ ಗೆ ಚಿತ್ರತಂಡ ನಿರ್ಧರಿಸಿತ್ತು.
ಆದರೆ ಈಗ ಖಾನ್‌ ನ ಚಿತ್ರ ಸಿನಿ ರೇಸ್‌ ನಿಂದ ಹಿಂದೆ ಸರಿದಿದ್ದು, ಕೆಜಿಎಫ್‌ ಗೆಲುವಿಗೆ ಮತ್ತಷ್ಟು ಅವಕಾಶ ಸಿಕ್ಕಂತಾಯಿತು.
ಆಮಿರ್‌ ಖಾನ್‌ ನಟನೆಯ ಲಾಲ್‌ ಸಿಂಗ್‌ ಛಡ್ಡಾ ಚಿತ್ರ ಏ.14ರ ಬದಲು ಆ.11ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದ ಕೆಲಸಗಳು ಇನ್ನು ಮುಗಿಯದ ಕಾರಣ ಚಿತ್ರದ ಬಿಡುಗಡೆಯನ್ನು ಆಗಸ್ಟ್‌ ಗೆ ಮುಂದೂಡಲಾಗಿದೆ ಎಂದು ಆಮಿರ್‌ ಖಾನ್‌ ಪ್ರೊಡಕ್ಷನ್ಸ್‌ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!