ಠಾಕ್ರೆ ಬಣ ತ್ಯಜಿಸಿ ಶಿಂಧೆ ಬಣಕ್ಕೆ ಸೇರ್ಪಡೆಯಾದ ಮತ್ತೊಬ್ಬ ಮಹಾ ಸಂಸದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾರಾಷ್ಟ್ರದಲ್ಲಿ ಶಿವಸೇನೆ ಬಣ ಜಗಳ ಮತ್ತೊಂದು ಹಂತಕ್ಕೆ ಮುಟ್ಟಿದೆ. ಶಿವಸೇನೆ ಎರೆಡು ಬಣಗಳಾಗಿ ಹೋರಾಟಕ್ಕಿಳಿದಿದೆ. ಈ ನಡುವೆ ಮತ್ತೊಬ್ಬ ಸಂಸದ ಉದ್ಧವ್ ಠಾಕ್ರೆ ಪಾಳಯವನ್ನು ತೊರೆದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣಕ್ಕೆ ಸೇರಿದ್ದಾರೆ. ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಸಂಸದ ಗಜಾನನ ಕೀರ್ತಿಕರ್ ಅವರು ನೂತನವಾಗಿ ಶಿಂಧೆ ಬಣ ಸೇರಿದ ಸಂಸದರಾಗಿದ್ದಾರೆ.
ಶಿವಸೇನೆಯ 18 ಲೋಕಸಭಾ ಸದಸ್ಯರಲ್ಲಿ 12 ಸಂಸದರು ಶಿಂಧೆ ಬಣ ಸೇರಿದ್ದರು. ಇದೀಗ 13 ನೇ ವ್ಯಕ್ತಿಯಾಗಿ ಕೀರ್ತಿಕರ್ ಸೇರ್ಪಡೆಯಾಗಿದ್ದಾರೆ.  ಈಗಾಗಲೇ ಪಕ್ಷದ 56 ಶಾಸಕರ ಪೈಕಿ 40 ಶಾಸಕರ ಬೆಂಬಲವನ್ನು ಹೊಂದಿರುವ ಮತ್ತು ಅಧಿಕಾರದಲ್ಲಿರುವ ಏಕನಾಥ್ ಶಿಂಧೆ ಬಣ ಶಿವಸೇನೆಯ ಪ್ರಬಲ ಬಣವಾಗಿ ಮಾರ್ಪಟ್ಟಿದೆ.
ಶ್ರೀ ಕೀರ್ತಿಕರ್ ಅವರ ನಡೆ ಆಶ್ಚರ್ಯಕರವೇನಲ್ಲ. ಏಕನಾಥ್ ಶಿಂಧೆ ಮಾಡಿದ್ದನ್ನು ಉದ್ಧವ್ ಠಾಕ್ರೆ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹಲವು ಕಾಲದಿಂದ ಹೇಳುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!