ಸಾಹಿತ್ಯ ಹಬ್ಬ ʼಮಂಗಳೂರು ಲಿಟ್ ಫೆಸ್ಟ್ʼ ಗೆ ಚಾಲನೆ

ಹೊಸದಿಗಂತ ವರದಿ, ಮಂಗಳೂರು
ನಾಲ್ಕನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಗೆ ಶುಕ್ರವಾರ ನಗರದ ಓಶಿಯನ್ ಪರ್ಲ್ ಹೋಟೆಲ್‌ ಸಭಾಂಗಣದಲ್ಲಿ ಚಾಲನೆ ದೊರೆಯಿತು.
ಶತಾವಧಾನಿ ಡಾ.ಆರ್ ಗಣೇಶ್ ಚಿಂತನ ಮಂಥನಗಳ ಮಂಗಳೂರು ಸಾಹಿತ್ಯ ಹಬ್ಬಕ್ಜೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಾಡೋಜ ಕೆ.ಪಿ.ರಾವ್, ಮಿಥಿಕ್ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಪ್ರಸನ್ನ, ಸಂಘಟಕ ಸುನಿಲ್ ಕುಲಕರ್ಣಿ, ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಪ್ರಾಚೀನ ಭಾರತೀಯ ಶಾಂತಿ, ಸಮೃದ್ಧತೆ ಹಾಗೂ ಸಮಷ್ಟಿ ಹಿತದ ಪರಿಕಲ್ಪನೆಯನ್ನು ಪ್ರದರ್ಶಿಸುವ ಉದ್ದೇಶದಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಲಿಟ್ ಫೆಸ್ಟ್‌ನಲ್ಲಿ,ಅನೇಕ ಸಮಕಾಲೀನ ವಿಚಾರಗಳೂ ಚರ್ಚೆಗೊಳಗಾಗಲಿವೆ.
ರಷ್ಯಾ-ಯೂಕ್ರೇನ್ ಬಿಕ್ಕಟ್ಟು ಭಾರತೀಯ ದೃಷ್ಟಿಕೋನದ ಬಗ್ಗೆ ಡಾ.ದತ್ತೇಶ್ ಪ್ರಭು ಪಾರುಲ್ಕರ್, ಸುಮಿತ್ ಪಾಂಡೆ, ನಯನಾ ಆನಂದ್ ವಿಮರ್ಶಿಸುವರು. ಭಾಷೆ ಮತ್ತು ತಂತ್ರಜ್ಞಾನದ ಬಗ್ಗೆ ಕೆ.ಪಿ.ರಾವ್ ಹಾಗೂ ಬೇಳೂರು ಸುದರ್ಶನ ಮಾತನಾಡುವರು, ಕಾಶ್ಮೀರದ ಕಥೆಗಳು ಎಂಬ ಗೋಷ್ಠಿಯನ್ನು ಲೇಖಕಿ ಸಹನ ವಿಜಯ್ ಕುಮಾರ್ ಹಾಗೂ ಅಜೇಯ್ ಭಾರತಿ ನಿರ್ವಹಿಸುವರು. ಬೋಸ್ ಅವರ ಇನ್ನೂ ಹೇಳದ ಕಥೆ ಎಂಬ ವಿಚಾರವಾಗಿ ಅನುಜ್ ಧರ್, ಚಂದ್ರಚೂಡ್ ಬೋಸ್, ನವನೀತ್ ಕೃಷ್ಣ ಚರ್ಚಿಸಲಿದ್ದಾರೆ.
ಶನಿವಾರ ಎರಡನೇ ದಿನದ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ, ಅರವಿಂದ ಚೊಕ್ಕಾಡಿ ಮತ್ತು ಅಶ್ವಿನಿ ದೇಸಾಯಿ ಪಠ್ಯ ವಿಮರ್ಶೆ ಕೈಗೊಳ್ಳುವರು. ಕನ್ನಡಿಗರ ಕಣ್ಣಲ್ಲಿ ಸಾಂಸ್ಕೃತಿಕ ಭಾರತ ಎಂಬ ವಿಚಾರವಾಗಿ ಡಾ.ಜೆ.ಬಿ.ಹರೀಶ, ಡಾ.ನಿರಂಜನ ವಾನಳ್ಳಿ ಮತ್ತು ಜಿ.ಆರ್.ಸಂತೋಷ್ ಮಾತನಾಡುವರು, ಕಶ್ಮೀರ್ ಫೈಲ್ಸ್ ರೀಲ್ ಮತ್ತು ರಿಯಲ್’ ಎಂಬ ವಿಚಾರವಾಗಿ ಕಲಾವಿದ ಪ್ರಕಾಶ್ ಬೆಳವಾಡಿ, ನಾಗರಿಕತೆಯ ನಿರೂಪಣೆ ಎಂಬ ವಿಚಾರವಾಗಿ ನಿತಿನ್ ಶ್ರೀಧರ್, ಸಾಯಿಸ್ವರೂಪ ಅಯ್ಯರ್, ಗಣತ್ರ ಸಮಾಲೋಚಿಸುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!