ಹಿಜಾಬ್-ಕೇಸರಿ ವಿವಾದ ಕೊನೆಯಾಗಲಿ: ಬಾಳೆಹಣ್ಣಿನ ಮೇಲೆ ಬರೆದು ದೇವರ ಮೊರೆ ಹೋದ ಭಕ್ತ!

ಹೊಸದಿಗಂತ ವರದಿ,ಬಳ್ಳಾರಿ:

ಹಿಜಾಬ್- ಕೇಸರಿ ವಿವಾದ ರಾಜ್ಯವಷ್ಟೇ ಅಲ್ಲ, ದೇಶದಾದ್ಯಂತ ಹರಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸರ್ಕಾರ, ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳು ಶ್ರಮಿಸುತ್ತಿದ್ದು, ಈ ವಿವಾದ ತಣ್ಣಗಾದಂತೆ ಕಾಣಿಸುತ್ತಿಲ್ಲ, ಭಕ್ತನೊಬ್ಬ ಬಾಳೆಹಣ್ಣಿನ ಮೇಲೆ, ಹಿಜಾಬ್-ಕೇಸರಿ ವಿವಾದ ಕೊನೆಯಾಗಲಿ, ತೊಲಗಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದು ಗಮನಸೆಳೆದಿದ್ದಾರೆ. ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಶ್ರೀ ಹುತ್ತಿನ ಎಲ್ಲಮ್ಮ ದೇವಿ ಜಾತ್ರೆ ನಿಮಿತ್ತ ನಡೆದ ರಥೋತ್ಸವದ ವೇಳೆ ಬಾಳೆ ಹಣ್ಣಿನಲ್ಲಿ ಬರೆದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ದಿನದಿಂದ ದಿನಕ್ಕೆ ಹಿಜಾಬ್-ಕೇಸರಿ ವಿವಾದ ಜೋರಾಗುತ್ತಿದ್ದು, ಜನರಲ್ಲಿ ಶಾಂತಿ, ನೆಮ್ಮದಿ ನೀಡಿ, ಈ ವಿವಾದವನ್ನು ಕೊನೆಗೊಳ್ಳುವಂತೆ ಮಾಡಬೇಕು ಎಂದು ದೇವಿಯಲ್ಲಿ ಭಕ್ತನೋಬ್ಬ ಪ್ರಾರ್ಥಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!