ಸಿದ್ದರಾಮಯ್ಯ ಸರಕಾರದ ಅವಧಿಯ ಹಗರಣದ ತನಿಖೆಯಾಗಲಿ: ಎನ್. ರವಿಕುಮಾರ್

ಹೊಸದಿಗಂತ ವರದಿ,ಕಲಬುರಗಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಜನರಿಗೆ ಕೇವಲ ಸುಳ್ಳು ಭರವಸೆ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಎನ್ ರವಿಕುಮಾರ್ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಸ್ ಯಾತ್ರೆ ಆರಂಭವಾಗಿದೆ. ಅದು ಸದ್ಯದಲ್ಲೇ ಪಂಚರ್ ಆಗಲಿದೆ.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ರಾಜ್ಯವನ್ನು ಅದು ಕತ್ತಲೆಗೆ ದುಡಿತು. ಈಗ ಉಚಿತ ವಿದ್ಯುತ್ ನೀಡುವುದಾಗಿ ಜನರಿಗೆ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಪಕ್ಷ ಸುಳ್ಳು, ಪೊಳ್ಳು ಹೇಳುವ ಪಕ್ಷವಾಗಿದೆ ಎಂದು ಕಿಡಿಕಾರಿದರು.

ಇದಲ್ಲದೇ, ಬೆಳಗಾವಿಯಲ್ಲಿ ನಡೆದ ಬಸ್ ಯಾತ್ರೆಯಲ್ಲಿ ಬಿಜೆಪಿ 40% ಪರ್ಸೆಂಟೇಜ್ ಸರಕಾರ ಎಂದು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದಕ್ಕೆ ಅವರ ಬಳಿ ಯಾವುದೇ ದಾಖಲೆ ಇಲ್ಲ. ಕೆಂಪಣ್ಣನ ಬಳಿಯೂ ಯಾವುದೇ ಪುರಾವೆ ಇಲ್ಲ. ಆದರೆ, ಸಿದ್ದರಾಮಯ್ಯನವರ ಸರಕಾರದಲ್ಲಿ 50% ಗಿಂತಲೂ ಹೆಚ್ಚಿನ ಪರ್ಸೆಂಟೇಜ್ ಅವ್ಯವಹಾರ ನಡೆದಿದೆ. ಅದಕ್ಕೆ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ ಎಂದರು.

2016-17 ರಲ್ಲಿ ಸಿದ್ದರಾಮಯ್ಯ ಸರಕಾರದ ಅವದಿಯಲ್ಲಿ ಬೆಂಗಳೂರು ನಗರದಲ್ಲಿ ನಡೆದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಸುಮಾರು 9.47 ಕಿಲೋ ಮೀಟರ್ ರಸ್ತೆ ಕಾಮಗಾರಿಗೆ 75 ಕೋಟಿ ರು. ಟೆಂಡರ್ ಕರೆಯಲಾಗಿತ್ತು. ಅದನ್ನು 53% ರಷ್ಟು ಹೆಚ್ಚಿಸಿ 115 ಕೋಟಿ ರು. ಮಾಡಲಾಗಿತ್ತು. ಇದಕ್ಕೆ ಸಿದ್ದರಾಮಯ್ಯ ಅವರೇ ಉತ್ತರಿಸಿಬೇಕು ಎಂದರು.

ಸಿದ್ದರಾಮಯ್ಯ ಅವರ ಸರಕಾರ 53% ಪರ್ಸೆಂಟೇಜ್ ಸರಕಾರವಾಗಿತ್ತು. ಬೆಂಗಳೂರು ಸಿಟಿ ಟೆಂಡರ್ ಶ್ಯೂರ್ ರಸ್ತೆಯಲ್ಲಿ 7.5 ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ 58 ಕೋಟಿ ರು.ಗೆ ಟೆಂಡರ್ ಆಗಿತ್ತು. ಆದರೆ, ಅದನ್ನು 87 ಕೋಟಿ ರು.ಗೆ ಹೆಚ್ಚು ಮಾಡಿದರು. ಶೇ. 47ರಷ್ಟು ಮೊತ್ತವನ್ನು ಹೆಚ್ಚು ಮಾಡಲಾಗಿತ್ತು. ಈ ಕುರಿತು ಕೂಡಲೇ ತನಿಖೆ ಮಾಡಬೇಕು ಎಂದು ಸರಕಾರ ಮನವಿ ಸಲ್ಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!