May 26, 2026
Tuesday, May 26, 2026
spot_img

LIFE | ನಮ್ಮ ಜೀವನದಲ್ಲಿ ‘pause’ ಕೊಡಬೇಕಾದ ಟೈಮ್ ಇದು..

ಜೀವನ ಯಾವಾಗಲೂ ಓಡುತ್ತಿರಬೇಕು ಅನ್ನೋ ಒತ್ತಡದಲ್ಲಿ ನಾವು ಬದುಕುತ್ತಿದ್ದೇವೆ. ಕೆಲಸ, ಜವಾಬ್ದಾರಿ, ಗುರಿ, ನಿರೀಕ್ಷೆಗಳು ಇವೆಲ್ಲದರ ನಡುವೆ ನಾವು ಸ್ವಲ್ಪ ನಿಲ್ಲೋದೇ ಮರೆತುಬಿಡುತ್ತೇವೆ. ಆದರೆ ಸತ್ಯ ಏನೆಂದರೆ, ಕೆಲವೊಮ್ಮೆ ಮುಂದೆ ಹೋಗೋದಕ್ಕಿಂತ ನಿಲ್ಲೋದು ಹೆಚ್ಚು ಮುಖ್ಯ ಅನಿಸಿಬಿಡುತ್ತದೆ.

ಕೆಲವೊಮ್ಮೆ ಮನಸ್ಸು ತುಂಬಾ ಗೊಂದಲವಾಗಿರುವಾಗ, ಯಾವ ದಾರಿ ಹಿಡಿಯಬೇಕು ಅನ್ನೋದೇ ಅರ್ಥವಾಗದಾಗ, ಅದು pause ಬೇಕಾದ ಮೊದಲ ಸೂಚನೆ. ಆ ಸಮಯದಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಸ್ವಲ್ಪ ನಿಂತು ಯೋಚಿಸುವುದು ಉತ್ತಮ. ಯಾಕೆಂದರೆ ಗೊಂದಲದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಹುಶಃ ನಮ್ಮನ್ನು ಇನ್ನಷ್ಟು ಗೊಂದಲಕ್ಕೆ ತಳ್ಳುತ್ತವೆ.

ಮತ್ತೊಂದು ಕ್ಷಣ ಎಂದರೆ ನಾವು ನಿರಂತರವಾಗಿ ದಣಿದಂತೆ ಅನಿಸುವಾಗ. ದೇಹ ಮಾತ್ರವಲ್ಲ, ಮನಸ್ಸೂ tired ಆಗಿರುತ್ತದೆ. ಆದರೆ ನಾವು ಅದನ್ನು ಇಗ್ನೋರ್ ಮಾಡುತ್ತೇವೆ. ‘ಇನ್ನೂ ಸ್ವಲ್ಪ ಮಾಡಬೇಕು’ ಅನ್ನೋ ಒತ್ತಡದಲ್ಲಿ ನಮ್ಮನ್ನು ನಾವು push ಮಾಡುತ್ತೇವೆ. ಆ ಸಮಯದಲ್ಲಿ ಒಂದು pause ನಮ್ಮನ್ನು ಮತ್ತೆ reset ಮಾಡುತ್ತದೆ.

ಇದನ್ನೂ ಓದಿ:

ಇನ್ನೊಂದು ಮುಖ್ಯ ಕ್ಷಣ ಅಂದ್ರೆ ನಾವು ನಮ್ಮನ್ನೇ ಕಳೆದುಕೊಂಡಂತೆ ಅನಿಸುವಾಗ. ದಿನಗಳು ಹೋಗುತ್ತಿವೆ, ಕೆಲಸ ನಡೆಯುತ್ತಿದೆ, ಆದರೆ ಒಳಗೆ ಏನೋ ಖಾಲಿ ಅನಿಸುತ್ತಿದ್ದರೆ ಅದು ಕೂಡ ಒಂದು ಸಿಗ್ನಲ್. ಆ ಸಮಯದಲ್ಲಿ ಸ್ವಲ್ಪ ದೂರ ನಿಂತು ನಮ್ಮ ಜೀವನವನ್ನು observe ಮಾಡೋದು ಅಗತ್ಯ.

Pause ಅಂದ್ರೆ ನಿಲ್ಲೋದು ಅಲ್ಲ… ಅದು ಮತ್ತೆ ಸರಿಯಾಗಿ ಸಾಗಲು ತೆಗೆದುಕೊಳ್ಳುವ ಉಸಿರು. ಕೆಲವೊಮ್ಮೆ ನಾವು ನಿಧಾನವಾಗಿ ನಿಂತಾಗಲೇ, ನಾವು ಯಾವ ದಿಕ್ಕಿಗೆ ಹೋಗಬೇಕು ಅನ್ನೋ ಸ್ಪಷ್ಟತೆ ಸಿಗುತ್ತದೆ.

ಹೀಗಾಗಿ ಜೀವನದಲ್ಲಿ ಯಾವಾಗಲೂ ಓಡಬೇಕೆಂಬ ಒತ್ತಡ ಬೇಡ. ಕೆಲವೊಮ್ಮೆ ನಿಲ್ಲಿ, ಉಸಿರಾಡಿ, ಯೋಚಿಸಿ…
ಯಾಕೆಂದರೆ ಸರಿಯಾದ pause ನಮ್ಮ ಮುಂದಿನ ದಾರಿಯನ್ನು ಸ್ಪಷ್ಟ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !