August 22, 2026
Saturday, August 22, 2026
spot_img

LIFE | ಮೌನದಲ್ಲಿ ನಮ್ಮನ್ನೇ ನಾವು ಎದುರಿಸೋದು ಯಾಕೆ ಕಷ್ಟವಾಗುತ್ತೆ?

ಒಮ್ಮೆ ಗಮನಿಸಿ ನೋಡಿ…
ಸುತ್ತಮುತ್ತ ಶಬ್ದ ಇಲ್ಲದೆ, ಫೋನ್ ಕೈಯಲ್ಲಿ ಇಲ್ಲದೆ, ಮಾತನಾಡೋರು ಯಾರೂ ಇಲ್ಲದೆ ಕೆಲ ನಿಮಿಷ ಒಬ್ಬಂಟಿಯಾಗಿ ಕುಳಿತುಕೊಳ್ಳೋದು ನಮಗೆ ಯಾಕೆ ಅಸೌಕರ್ಯವಾಗಿ ಅನಿಸಿಬಿಡುತ್ತದೆ? ಯಾಕೆ ಮನಸ್ಸು ತಕ್ಷಣ ಏನಾದರೂ ಡಿಸ್ಟ್ರಕ್ಷನ್ ಹುಡುಕುತ್ತದೆ? ಒಂದು ಹಾಡು, ಒಂದು ವಿಡಿಯೋ, ಒಂದು ಕಾಲ್, ಇಲ್ಲಾಂದ್ರೆ ಕನಿಷ್ಠ ನೋಟಿಫಿಕೇಶನ್ ಆದರೂ ಬೇಕೆನಿಸುತ್ತದೆ.

ಕಾರಣ, ಸೈಲೆನ್ಸ್ ಹೊರಗೆ ಮೌನ ಇರಬಹುದು… ಆದರೆ ಒಳಗೆ ಅದು ತುಂಬಾ ಮಾತಾಡುತ್ತದೆ. ನಾವು ಯೋಚಿಸುತ್ತಿದ್ದ ಯೋಚನೆಗಳು, ನಾವು avoid ಮಾಡ್ತಿದ್ದ ಪ್ರಶ್ನೆಗಳು, ಮನಸ್ಸಿನೊಳಗಿನ ಖಾಲಿತನ ಇವೆಲ್ಲವೂ ಮೌನದಲ್ಲಿ ಸ್ಪಷ್ಟವಾಗಿ ಕೇಳಿಸತೊಡಗುತ್ತವೆ. ಅದನ್ನ ಎದುರಿಸೋದಕ್ಕಿಂತ ಶಬ್ದದೊಳಗೆ ಕಳೆದುಹೋಗೋದು ಸುಲಭ ಅನಿಸುತ್ತದೆ.

ಒಬ್ಬಂಟಿಯಾಗಿ ಇರೋದು ಕಷ್ಟ ಅನ್ನಿಸೋದೂ ಇದೇ ಕಾರಣಕ್ಕೆ. ಏಕೆಂದರೆ ಅಲ್ಲಿ ನಾವು ನಿಜವಾಗಿಯೂ ನಮ್ಮ ಜೊತೆ ಇರಬೇಕು. ಮುಖವಾಡಗಳಿಲ್ಲದೆ, ಬ್ಯುಸಿ ಅನ್ನೋ ಕಾರಣಗಳಿಲ್ಲದೆ, ಡಿಸ್ಟ್ರಕ್ಷನ್ ಗಳಿಲ್ಲದೆ ಕೇವಲ ನಾವು ಮತ್ತು ನಮ್ಮ ಮನಸ್ಸು. ಅದು ಎಲ್ಲರಿಗೂ ಸುಲಭ ಅಲ್ಲ.

ಇದನ್ನೂ ಓದಿ:

ಆದರೆ ಒಂದು ಸತ್ಯ ಇದೆ ನಾವು ಸೈಲೆನ್ಸ್ ಜೊತೆಗೆ ಕಂಫರ್ಟಬಲ್ ಆದ ದಿನದಿಂದಲೇ, ನಮ್ಮನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಲು ಶುರು ಮಾಡುತ್ತೇವೆ. ಒಬ್ಬಂಟಿತನ ದುಃಖ ಅಲ್ಲ; ಅದು ನಮ್ಮೊಳಗಿನ ಧ್ವನಿಯನ್ನು ಕೇಳಿಸೋ ಜಾಗ.

ಯಾವಾಗಲೂ ಗದ್ದಲದ ಮಧ್ಯೆ ಬದುಕೋದಕ್ಕಿಂತ, ಕೆಲವೊಮ್ಮೆ ಮೌನದ ಜೊತೆ ಕೂತು ನೋಡಿ.
ಮೊದಲಿಗೆ ಅಸೌಕರ್ಯ ಅನಿಸಬಹುದು…
ಆದರೆ ನಿಧಾನವಾಗಿ ಅದೇ ನಿಮ್ಮ ಮನಸ್ಸಿಗೆ ನೆಮ್ಮದಿಯ ಸ್ಥಳವಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !