October 8, 2026
Thursday, October 8, 2026
spot_img

PBKS vs DC | ಡೆಲ್ಲಿ ‘ಪ್ಲೇಆಫ್’ ಕನಸು ಜೀವಂತ: ನಾಲ್ಕು ಸಲ ಸೋತು ಸಂಕಷ್ಟಕ್ಕೆ ಸಿಲುಕಿದ ಅಯ್ಯರ್ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಭಾರೀ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ 19 ಓವರ್‌ಗಳಲ್ಲೇ ಪಂದ್ಯ ಮುಗಿಸಿ ಗಮನಸೆಳೆಯಿತು. ಇತ್ತ ಪಂಜಾಬ್ ಕಿಂಗ್ಸ್‌ಗೆ ಇದು ಸತತ ನಾಲ್ಕನೇ ಸೋಲಾಗಿದ್ದು, ತಂಡದ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಜೋಡಿ ಪವರ್‌ಪ್ಲೇನಲ್ಲಿ ವೇಗವಾಗಿ ರನ್ ಕಲೆಹಾಕಿತು. ಪ್ರಿಯಾಂಶ್ 56 ರನ್ ಸಿಡಿಸಿದರೆ, ನಾಯಕ ಶ್ರೇಯಸ್ ಅಯ್ಯರ್ ಅಜೇಯ 59 ರನ್ ಬಾರಿಸಿ ತಂಡವನ್ನು 211 ರನ್‌ಗಳ ಭದ್ರ ಮೊತ್ತಕ್ಕೆ ಕೊಂಡೊಯ್ದರು.

ಇದನ್ನೂ ಓದಿ:

ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿಗೆ ಆರಂಭದಲ್ಲೇ ವಿಕೆಟ್ ಆಘಾತ ಎದುರಾದರೂ, ಅಕ್ಷರ್ ಪಟೇಲ್ 56 ರನ್ ಮತ್ತು ಡೇವಿಡ್ ಮಿಲ್ಲರ್ 51 ರನ್‌ಗಳ ಜವಾಬ್ದಾರಿಯುತ ಆಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಕೊನೆಯಲ್ಲಿ ಆಶುತೋಷ್ ಶರ್ಮಾ ಹಾಗೂ ಮಾಧವ್ ತಿವಾರಿ ವೇಗದ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಡೆಲ್ಲಿ ಪರ ತಿರುಗಿಸಿದರು.

ಈ ಗೆಲುವಿನಿಂದ ಡೆಲ್ಲಿ ತಂಡ ಮತ್ತೆ ಪ್ಲೇಆಫ್ ಪೈಪೋಟಿಯಲ್ಲಿ ಬಲಿಷ್ಠವಾಗಿ ಉಳಿದಿದೆ.

Must Read