June 17, 2026
Wednesday, June 17, 2026
spot_img

FOOD | ಹೊಟ್ಟೆಗೆ ಹಗುರ, ಆರೋಗ್ಯಕ್ಕೂ ಬೆಸ್ಟ್: ತೂಕ ನಿಯಂತ್ರಣಕ್ಕೆ ಸಹಕಾರಿ ಈ ಬ್ರೌನ್ ರೈಸ್ ಕಿಚಡಿ

ಮಧ್ಯಾಹ್ನದ ಊಟಕ್ಕೆ ಅತ್ಯಂತ ಸೂಕ್ತವಾದ, ತೂಕ ಇಳಿಸಲು ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿಯಾಗುವ ಪೋಷಕಾಂಶ ಭರಿತ ಬ್ರೌನ್ ರೈಸ್ ಕಿಚಡಿ ರೆಸಿಪಿ ಇಲ್ಲಿದೆ. ಇದು ಹೊಟ್ಟೆಗೆ ಹಗುರವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು
ಬ್ರೌನ್ ರೈಸ್
ಹೆಸರುಬೇಳೆ
ಕ್ಯಾರೆಟ್
ಬೀನ್ಸ್
ಹಸಿರು ಬಟಾಣಿ
ಈರುಳ್ಳಿ
ಟೊಮ್ಯಾಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಹಸಿ ಮೆಣಸಿನಕಾಯಿ
ತುಪ್ಪ ಅಥವಾ ಎಣ್ಣೆ
ಸಾಸಿವೆ ಮತ್ತು ಜೀರಿಗೆ
ಇಂಗು
ಅರಿಶಿನ ಪುಡಿ
ಗರಂ ಮಸಾಲಾ ಪುಡಿ
ಉಪ್ಪು
ನೀರು
ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ

ಬ್ರೌನ್ ರೈಸ್ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಅದನ್ನು ಹೆಸರುಬೇಳೆಯೊಂದಿಗೆ ಸೇರಿಸಿ ಚೆನ್ನಾಗಿ ತೊಳೆದು, ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಒಂದು ಕುಕ್ಕರ್‌ನಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಇಂಗು ಹಾಕಿ ಚಟಪಟಾಯಿಸಿ. ನಂತರ ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ಬಳಿಕ ಟೊಮ್ಯಾಟೊ ಸೇರಿಸಿ ಮೃದುವಾಗುವವರೆಗೆ ಬಾಡಿಸಿ. ಬಳಿಕ ಕತ್ತರಿಸಿದ ತರಕಾರಿಗಳು, ಅರಿಶಿನ ಪುಡಿ, ಗರಂ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ನಿಮಿಷ ಚೆನ್ನಾಗಿ ಕೈಯಾಡಿಸಬೇಕು.

ನಂತರ ನೆನೆಸಿದ ಬ್ರೌನ್ ರೈಸ್ ಮತ್ತು ಹೆಸರುಬೇಳೆಯನ್ನು ನೀರು ಸೋಸಿ ಕುಕ್ಕರ್‌ಗೆ ಹಾಕಿ. ಇದಕ್ಕೆ 4 ರಿಂದ 5 ಕಪ್ ನೀರು ಸೇರಿಸಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 4 ರಿಂದ 5 ವಿಸಿಲ್ ಕೂಗಿಸಿ. ಬ್ರೌನ್ ರೈಸ್ ಸಂಪೂರ್ಣವಾಗಿ ಬೇಯಲು ಇಷ್ಟು ವಿಸಿಲ್ ಅಗತ್ಯವಿರುತ್ತದೆ. ಕುಕ್ಕರ್ ಪ್ರೆಶರ್ ಸಂಪೂರ್ಣವಾಗಿ ಇಳಿದ ನಂತರ ಮುಚ್ಚಳ ತೆಗೆದು, ಮೇಲಿಂದ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಒಂದು ಚಮಚ ತುಪ್ಪವನ್ನು ಸೇರಿಸಿ ಹದವಾಗಿ ಮಿಕ್ಸ್ ಮಾಡಿದರೆ ಬಿಸಿಬಿಸಿಯಾದ, ಆರೋಗ್ಯಕರ ಬ್ರೌನ್ ರೈಸ್ ಕಿಚಡಿ ಸಿದ್ಧವಾಗುತ್ತದೆ. ಇದನ್ನು ಸೌತೆಕಾಯಿ ಮೊಸರು ಬಜ್ಜಿ ಅಥವಾ ಮನೆಯಲ್ಲೇ ಮಾಡಿದ ಉಪ್ಪಿನಕಾಯಿಯೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !