Tuesday, March 28, 2023

Latest Posts

ಕೊಡಗಿನಲ್ಲೂ ಶುರುವಾಯ್ತು ಲಿಂಗಾಯತ, ಪಂಚಮಸಾಲಿ ಮೀಸಲಾತಿ ಕಿಚ್ಚು

ಹೊಸದಿಗಂತ ವರದಿ ಸೋಮವಾರಪೇಟೆ:

ವೀರಶೈವ ಲಿಂಗಾಯತರೆಲ್ಲಾ ಒಂದೇ ಇಲ್ಲಿ ಉಪ ಜಾತಿಗಳ ಸುಳಿವಿಲ್ಲ ಅಂದುಕೊಂಡವರಿಗೆ ಈಗ ಲಿಂಗಾಯತ ಪಂಚಮ ಸಾಲಿ ಮೀಸಲಾತಿ ಹೋರಾಟದಲ್ಲಿ ಜಿಲ್ಲೆಯ ಯುವಕರು ಭಾಗವಹಿಸುವ ಮೂಲಕ ಶಾಕ್ ನೀಡಿದ್ದಾರೆ.

ಲಿಂಗಾಯತ ಪಂಚಮ ಸಾಲಿ ಜನಾಂಗವನ್ನ 2 ಎ ಮೀಸಲಾತಿ ನೀಡಬೇಕೆಂದು ಜಗದ್ಗುರು ಬಸವ ಜಯಮೃತ್ಯಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ 53 ದಿನಗಳಿಂದ ನಡೆಯುತ್ತಿರುವ ಪ್ರತಿಭಟನಾ ಧರಣಿ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯ ಹೋರಾಟದ ಪ್ರಮುಖ ಮೋಹನ್ ನೇತೃತ್ವದಲ್ಲಿ ಕಾರ್ಯದರ್ಶಿ ಅಜ್ಜಳ್ಳಿ ರವಿ, ವೀರಶೈವ ಮಹಾ ಸಭಾದ ಸೋಮವಾರಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷ ಆದರ್ಶ,ಲಿಖಿತ್,ಶಿವಶಂಕರ್,ಕುಮಾರ್,ಉದಯ,ಪ್ರತಾಪ್ ಹಾಗೂ ಪ್ರಶಾಂತ್ ಸೇರಿದಂತೆ ಹಲವು ಮಂದಿ ಭಾಗವಹಿಸಿ ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!