ಆಸ್ಟ್ರೇಲಿಯ ಪ್ರಧಾನಿ ಬಳಿ ಹಿಂದು ದೇವಾಲಯಗಳ ಮೇಲಿನ ದಾಳಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆಸ್ಟ್ರೇಲಿಯ ಪ್ರಧಾನಿ ಆಂಥೋನಿ ಅಲ್ಬನೀಸ್ ಜತೆ ನವದೆಹಲಿಯಲ್ಲಿ ಶುಕ್ರವಾರ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಆಸ್ಟ್ರೇಲಿಯದಲ್ಲಾಗುತ್ತಿರುವ ಹಿಂದು ದೇವಾಲಯಗಳ ಮೇಲಿನ ದಾಳಿಯ ವಿಷಯವನ್ನು ಪ್ರಸ್ತಾಪಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉಭಯ ನಾಯಕರು ಮಾತುಕತೆ ನಂತರ ನೀಡಿರುವ ಜಂಟಿ ಹೇಳಿಕೆಯಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, “ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯಲ್ಲಿನ ದೇವಸ್ಥಾನಗಳ ಮೇಲಿನ ದಾಳಿಯ ವರದಿಗಳು ನಿಯಮಿತವಾಗಿ ಬರುತ್ತಿರುವುದು ವಿಷಾದದ ಸಂಗತಿಯಾಗಿದೆ. ಇಂತಹ ಸುದ್ದಿಗಳು ಭಾರತದಲ್ಲಿ ಪ್ರತಿಯೊಬ್ಬರನ್ನು ಚಿಂತೆಗೀಡುಮಾಡುವುದು ಸಹಜ. ಈ ನಿಟ್ಟಿನಲ್ಲಿ ನಾನು ನಮ್ಮ ಭಾವನೆಗಳನ್ನು ಮತ್ತು ಕಳವಳಗಳನ್ನು ಪ್ರಧಾನ ಮಂತ್ರಿ ಅಲ್ಬನೀಸ್ ಅವರಿಗೆ ತಿಳಿಸಿದ್ದೇನೆ. ಪ್ರತಿಕ್ರಿಯೆಯಾಗಿ ಅವರು ಭಾರತೀಯ ಸಮುದಾಯದ ಸುರಕ್ಷತೆಯೇ ಅವರ ಆದ್ಯತೆಯಾಗಿರುವುದಾಗಿ ಭರವಸೆ ನೀಡಿದ್ದಾರೆ.” ಎಂದು ತಿಳಿಸಿದ್ದಾರೆ.

ಇದರ ಹೊರತಾಗಿ ಇಂಡೋ-ಪೆಸಿಫಿಕ್‌ನಲ್ಲಿ ಕಡಲ ಭದ್ರತೆ, ಬಲಿಷ್ಟ ಮತ್ತು ವಿಶ್ವಾಸಾರ್ಹ ಜಾಗತಿಕ ಪೂರೈಕೆ ಜಾಲದ ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರ ಮತ್ತು ಮಿಲಿಟರಿ ಲಾಜಿಸ್ಟಿಕ್ಸ್ ಸಹಕಾರದಂಥ ವಿಷಯಗಳಲ್ಲಿ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದೂ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!