ಪಂಚಗಂಗಾವಳಿ ನದಿಯಲ್ಲಿ ಬಲೆಗೆ ಬಿದ್ದ ಲಯನ್ ಫಿಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಲವು ಸಮುದ್ರ ಜೀವಿಗಳು ವಿಚಿತ್ರವಾಗಿರುತ್ತವೆ. ಕೆಲವಂತೂ ಹೆದರಿಕೆ ಹುಟ್ಟಿಸುವಂತೆ ಇರುತ್ತವೆ. ಇನ್ನು ಕೆಲವು ಸಮುದ್ರ ಜೀವಿಗಳು ನಿಜಕ್ಕೂ ಪ್ರಾಣಘಾತಕವಾಗಿರುತ್ತವೆ. ಇಂತಹ ಅಪರೂಪದ ಲಯನ್ ಫಿಶ್(Lion Fish) ಎಂಬ ಮೀನು ಉಡುಪಿ ಜಿಲ್ಲೆಯ ಗಂಗೊಳ್ಳಿಯ ಮೀನುಗಾರ ದಾಕುಹಿತ್ಲು ನಿವಾಸಿ ರಘು ಖಾರ್ವಿ ಎಂಬುವರು ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ ಭಾನುವಾರ ಮೀನು ಹಿಡಿಯುತ್ತಿದ್ದಾಗ ಅವರ ಬಲೆಗೆ ಬಿದ್ದಿದೆ.

ಸುಮಾರು ಆರು ಇಂಚು ಉದ್ದದ ಇರುವ ಈ ಮೀನು ಇಂಡೋ ಫೆಸಿಫಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಲಯನ್ ಫಿಶ್, ದಕ್ಷಿಣ ಫೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಸ್ಥಳಿಯ ಪ್ರಭೇದವಾಗಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಕರಾವಳಿ ತೀರದ ಸಮುದ್ರಗಳಲ್ಲಿ ಈ ಮೀನು ಕಂಡು ಬರುತ್ತಿದೆ. ಈ ವಿಷಕಾರಿ ಲಯನ್ ಫಿಶ್‌ನ ವೈಜ್ಞಾನಿಕ ಹೆಸರು ಟೆರೋಯಿಸ್. ಮೀನಿಗೆ ಜೀಬ್ರಾ ಮೀನು, ಫೈರ್‌ಫಿಶ್, ಟರ್ಕಿ ಮೀನು ಅಥವಾ ಬಟರ್ ಪ್ಲೈ ಅಥವಾ ಕಾಡ್ ಮುಂತಾದ ಹೆಸರುಗಳು ಕೂಡ ಇವೆ.

ಲಯನ್ ಫಿಶ್ ಕೆಂಪು, ಬಿಳಿ ಮತ್ತು ಕೆನೆ ಕಪ್ಪು ಬಣ್ಣದ ಪಟ್ಟಿಗಳು, ಪೆಕ್ಟೋರಲ್ ರೆಕ್ಕೆಗಳು ಮತ್ತು ಚೂಪಾದ ಮುಳ್ಳುಗಳನ್ನು ಹೊಂದಿದೆ. ಮನುಷ್ಯರು ಲಯನ್ ಮೀನನ್ನು ಸ್ಪರ್ಶಿಸಿ ಸಾವಿಗೆ ತುತ್ತಾದ ಪ್ರಕರಣಗಳು ಕೂಡ ಇವೆ. ಆದ್ದರಿಂದ ಈ ಮೀನನ್ನು ಬಹಳ ಜಾಗೃತೆಯಿಂದ ಹಿಡಿದು ಸಾಕಬೇಕು. ಈ ಮೀನು ಅಕ್ರಮಣಕಾರಿ ಪ್ರವೃತಿ ಹೊಂದಿರುವುದರಿಂದ ಮೀನಿನ ಹತ್ತಿರಕ್ಕೆ ಹೋಗುವಾಗ ಎಚ್ಚರಿಕೆ ಅಗತ್ಯ. ಈ ಮೀನು ತಿನ್ನಲು ಬಳಸುದಿಲ್ಲ. ಹೀಗಾಗಿ ಅದನ್ನು ಅಕ್ವೇರಿಯಂಗಳಲ್ಲಿ ಇಟ್ಟು ಸಾಕುತ್ತಾರೆ. ಲಯನ್ ಫಿಶ್ ನೋಡಲು ಅಂದವಾಗಿರುವುದರಿಂದ ಅಕ್ವೇರಿಯಂ ಮಾಡುವವರು ಇದನ್ನು ಉತ್ತಮ ಮೊತ್ತ ನೀಡಿ ಖರೀದಿಸುತ್ತಾರೆ ಎಂದು ಮಂಗಳೂರಿನ ಸೆಂಟ್ರಲ್ ಮರೈನ್ ಫಿಶರೀಸ್ ರಿಸೋರ್ಸ್ ಇನ್ಸಿಟ್ಯೂಟ್‌ನ (ಸಿಎಂಎಫ್‌ಆರ್‌ಐ) ವಿಜ್ಞಾನಿ ಪ್ರತಿಭಾ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!