ಹೊಸದಿಗಂತ ವರದಿ ವಿಜಯಪುರ:
ಬೈಕ್ ಸ್ಕಿಡ್ ಆಗಿ ಸಾಹಿತಿ ಅಸುನೀಗಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಸಾಹಿತಿ ರಾಜೇಂದ್ರಕುಮಾರ ಬಿರಾದಾರ (40) ಮೃತಪಟ್ಟ ದುರ್ದೈವಿ.
ರಾಜೇಂದ್ರಕುಮಾರ ಬಿರಾದಾರ ಇವರು ಬುಧವಾರ ಸಂಜೆ ಇಲ್ಲಿನ ರಾಮನಗರ ಬಳಿಯ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ಡಾಗಿದ್ದು, ರಸ್ತೆ ಪಕ್ಕದಲ್ಲಿ ನಿರ್ಮಿಸುತ್ತಿರುವ ನೀರಿನ ವಾಲ್ವ್‌ನ ಟ್ಯಾಂಕನಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.