500 ರೂ. ನೋಟು ಚಲಾವಣೆ ರದ್ದಾಗುತ್ತಾ..ಏನಂದ್ರು ರಿಸರ್ವ್ ಬ್ಯಾಂಕ್ ಗವರ್ನರ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

500 ಮತ್ತು 1000 ರೂ ನೋಟುಗಳ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳ ಕುರಿತು ಆರ್‌ಬಿಐ ಎಂಪಿಸಿ ಸಭೆಯಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟನೆ ನೀಡಿದ್ದಾರೆ. 500 ನೋಟು ಚಲಾವಣೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಯಥಾಸ್ಥಿತಿ ಮುಂದುವರಿಯಲಿದೆ. ಹಾಗೆಯೇ ರೂ.1000 ನೋಟು ಮುದ್ರಣ ಮತ್ತೆ ಆರಂಭವಾಗುವುದಿಲ್ಲ ಎಂದು ಹೇಳಿದ್ದಾರೆ. ಜನಸಾಮಾನ್ಯರು ಭಯಪಡುವ ಅಗತ್ಯವಿಲ್ಲ. ಸದ್ಯಕ್ಕೆ ರಿಸರ್ವ್ ಬ್ಯಾಂಕ್ ಈ 500 ಕರೆನ್ಸಿಯನ್ನು ಮುಚ್ಚುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದರು.

ಆರ್ಬಿಐ ಎಂಪಿಸಿ ಸಭೆಯ ಮೂರನೇ ದಿನವಾದ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಮಾತನಾಡಿ.. 500 ನೋಟು ಕೂಡ ಬ್ಯಾನ್ ಆಗಲಿದೆ ಎಂಬ ಊಹಾಪೋಹಗಳು ಜನಸಾಮಾನ್ಯರಲ್ಲಿ ಮೂಡಿವೆ. ಸದ್ಯಕ್ಕೆ 500 ರೂಪಾಯಿ ನೋಟುಗಳನ್ನು ರದ್ದು ಮಾಡುವ ಯೋಚನೆ ಆರ್ಬಿಐ ಬಳಿ ಇಲ್ಲ. ಅಲ್ಲದೆ, 1000 ರೂಪಾಯಿ ನೋಟುಗಳನ್ನು ಮತ್ತೆ ಮಾರುಕಟ್ಟೆಗೆ ತರುವುದಿಲ್ಲ ಎಂದರು.

ಇತ್ತೀಚೆಗೆ ಸರ್ಕಾರವು 2000 ಗುಲಾಬಿ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಿದೆ. ಅದರ ನಂತರ ಸುಮಾರು 50% 2000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಯಿತು. ನೀವು ಈ ನೋಟುಗಳನ್ನು ಬದಲಾಯಿಸಲು ಬಯಸಿದರೆ, ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಬದಲಾಯಿಸಬಹುದು. ಒಂದು ದಿನದಲ್ಲಿ ಕನಿಷ್ಠ 10 ನೋಟುಗಳನ್ನು ಬದಲಾಯಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!