ಹಳಿತಪ್ಪಿ ಪ್ಲಾಟ್ ಫಾರ್ಮ್ ಮೇಲಿದ್ದ ನೀರಿನ ಅಂಗಡಿಯೊಳಕ್ಕೆ ನುಗ್ಗಿದ ರೈಲು; ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ರೈಲೊಂದು ಹಳಿತಪ್ಪಿ ಚಲಿಸಿದ ಪರಿಣಾಮ ಪ್ಲಾಟ್‌ಫಾರ್ಮ್ ತುದಿಯಲ್ಲಿರುವ ಬಫರ್‌ ಗೆ ಡಿಕ್ಕಿ ಹೊಡೆದಿರುವ ಘಟನೆ ಚೆನ್ನೈ ರೈಲು ನಿಲ್ದಾಣದಲ್ಲಿ ನಡೆದಿದೆ.
ಅಪಘಾತ ಸಂಭವಿಸಿದಾಗ ರೈಲಿನಲ್ಲಿ ಪ್ರಯಾಣಿಕರಿರಲಿಲ್ಲ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಕೆಲವೇ ಮಂದಿ ಇದ್ದ ಕಾರಣ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ ಈ ವೇಳೆ ಐಆರ್‌ಸಿಟಿಸಿಗೆ ಸೇರಿದ ನೀರು ಮಾರಾಟ ಮಳಿಗೆಗೆ ಹಾನಿಯಾಗಿದೆ.
ಇದು ಸ್ಥಳೀಯ ಮಾರ್ಗಳಲ್ಲಿ ಸಂಚರಿಸುವ ಸಬ್‌ ಅರ್ಬನ್‌ ರೈಲಾಗಿದೆ. ರೈಲಿನಲ್ಲಿ ವಿದ್ಯುತ್ ಅಡಚಣೆಯಿಂದ ಉಂಟಾದ ಬ್ರೇಕ್ ವೈಫಲ್ಯದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ) ಹೇಳಿದ್ದಾರೆ.
ಅಪಘಾತ ಸಂಭವಿಸುವಾಗ ರೈಲು ನಿಧಾನವಾಗಿ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಆ ಸಮಯದಲ್ಲಿ ಪ್ಲಾಟ್‌ಫಾರ್ಮ್ ಹೆಚ್ಚು ಜನಸಂದಣಿ ಇರಲಿಲ್ಲ ಎಂದು ಹೇಳಿದ್ದಾರೆ. ಫ್ಲಾಟ್‌ ಪಾರ್ಮ್‌ ನ ತುದಿಗೆ ಹೋಗುವಷ್ಟರಲ್ಲಿ ಲೋಕೋಪೈಲೆಟ್‌ ನಿಯಂತ್ರಣ ಕಳೆದುಕೊಂಡು ಪ್ಲಾಟ್‌ ಫಾರಂ ಗೋಡೆಗೆ ಡಿಕ್ಕಿ ಹೊಡೆದು ಫ್ಲಾಟ್‌ ಫಾರಂ ಮೇಲೆ ಹತ್ತಿತು. ಲೋಕೋಪೈಲೆಟ್ ರೈಲಿನಿಂದ ಜಿಗಿದು ಪಾರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದಾಗಿ ಯಾವುದೇ ರೈಲನ್ನು ರದ್ದುಗೊಳಿಸಲಾಗಿಲ್ಲ. ಕಾರಣವನ್ನು ನಿರ್ಣಯಿಸಲು ಸೂಕ್ತ ಮಟ್ಟದಲ್ಲಿ ವಿಚಾರಣೆ ನಡೆಸಲಾಗುವುದು. ಬೀಚ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಒಂದರಲ್ಲಿ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ಪಿಆರ್‌ಒ ಎ ಎಲುಮಲೈ ಹೇಳಿದ್ದಾರೆ.
ಈ ನಿಲ್ದಾಣದ ಮಾರ್ಗದಲ್ಲಿ ಪ್ರತಿವಾರ 5.2 ಲಕ್ಷದಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ವಾರಂತ್ಯದ ದಿನಗಳಲ್ಲಿ ದೈನಂದಿನ ದಟ್ಟಣೆಯ 30-40% ರಷ್ಟು ಜನರು ಮಾತ್ರವೇ ಇರುತ್ತಾರೆ. ಅವರಲ್ಲಿ ಬಹಳಷ್ಟು ಪ್ರಯಾಣಿಕರು ಐಆರ್‌ಸಿಟಿಸಿಯ ನೀರು-ಮಾರಾಟದ ಅಂಗಡಿಯ ಬಳಿ ನಿಲ್ಲುತ್ತಾರೆ. ಅದೃಷ್ಟವಶಾತ್, ಅಪಘಾತ ಸಂಭವಿಸಿದಾಗ ಅಂಗಡಿಯ ಬಳಿ ಪ್ರಯಾಣಿಕರು ಇರಲಿಲ್ಲ ಎಂದು ಅಂಗಡಿಯ ಉದ್ಯೋಗಿಯೊಬ್ಬರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!