400 ದಿನಗಳಲ್ಲಿ ಲೋಕಸಭೆ ಚುನಾವಣೆ, ಮತದಾರರನ್ನು ತಲುಪಲು ಸಿದ್ದರಾಗಿ: ಪ್ರಧಾನಿ ಮೋದಿ ಕರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇನ್ನು ಕೇವಲ 400 ದಿನಗಳಲ್ಲಿ 2024ರ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ನಾವು ಮತದಾರರನ್ನು ತಲುಪಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ (BJP Executive Meeting). ಈ ಕುರಿತು ಪ್ರಧಾನಿ ಮಾತನಾಡಿದ್ದಾರೆ.

ಈ ವಿಷಯವನ್ನು ವಿವರಿಸಿದ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್, ನಮಗೆ 400 ದಿನಗಳು ಉಳಿದಿವೆ. ನಾವು ಜನರ ಸೇವೆಗಾಗಿ ಎಲ್ಲವನ್ನೂ ಮಾಡಬೇಕಾಗಿದೆ. ನಾವು ಇತಿಹಾಸವನ್ನು ರಚಿಸಬೇಕಾಗಿದೆ ಎಂಬ ಮೋದಿ ಅವರು ಹೇಳಿದ್ದಾರೆ.

ಮುಖ್ಯವಾಗಿ ನಾವು 18 ರಿಂದ 25 ವರ್ಷದೊಳಗಿನ ಯುವ ಮತದಾರರ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಈ ವರ್ಗದ ಮತದಾರರಿಗೆ ನಾವು ಉತ್ತಮ ಆಡಳಿತದ ಕಡೆಗೆ ಹೇಗೆ ಹೋಗುತ್ತಿದ್ದೇವೆ ಎಂದು ತಿಳಿಸಿಕೊಡಬೇಕು. ಅವರಿಗೆ ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಪರಿಚಯಿಸಬೇಕು ಮತ್ತು ಉತ್ತಮ ಆಡಳಿತದ ಭಾಗವಾಗಲು ಅವರಿಗೆ ಸಹಾಯ ಮಾಡಬೇಕು ಎಂದು ಮೋದಿ ಹೇಳಿದರು.

ಅದೇ ರೀತಿ ಅಲ್ಪಸಂಖ್ಯಾತರಾದ ಬೋಹ್ರಾಗಳು, ಪಸ್ಮಾಂಡಾಗಳು ಮತ್ತು ಸಿಖ್ಖರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವಂತೆ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!