ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಅವರ ತಂದೆ ಮೋತಿ ದದ್ಲಾನಿ ನಿಧನರಾಗಿದ್ದಾರೆ. ತಂದೆಯನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ತಂದೆಯನ್ನು ಕೊನೆ ಬಾರಿ ನೋಡುವ ಅವಕಾಶ ಕೂಡ ವಿಶಾಲ್ ಪಾಲಿಗೆ ಇಲ್ಲದಂತಾಗಿದೆ.
ವಿಶಾಲ್‌ಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಐಸೋಲೇಟ್ ಆಗಿದ್ದಾರೆ. ಕಳೆದ ಕೆಲ ದಿನಗಳಿಂದ ವಿಶಾಲ್ ತಂದೆಗೆ ಅನಾರೋಗ್ಯ ಕಾಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಅವರು ಕೊನೆಯುಸಿರೆಳೆದಿದ್ದು, ವಿಶಾಲ್ ಭಾವನಾತ್ಮಕ ಪೋಸ್ಟ್ ಒಂದನ್ನ ಮಾಡಿದ್ದಾರೆ.
ನನ್ನ ಬೆಸ್ಟ್ ಫ್ರೆಂಡ್, ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ದೇವರ ಬಳಿ ಕೇಳೋದಕ್ಕೆ ನನಗೇನೂ ಉಳಿದಿರಲಿಲ್ಲ. ಇಂಥ ತಂದೆಯನ್ನು ನನಗೆ ನೀಡಿದ್ದಕ್ಕೆ ದೇವರಿಗೆ ಧನ್ಯವಾದ. ನನ್ನಲ್ಲಿ ಒಳ್ಳೆತನ ಅಂತೇನಾದರೂ ಇದ್ದರೆ ಅದೆಲ್ಲವೂ ನನ್ನ ತಂದೆಯೇ ನೀಡಿದ್ದು.
ಕೆಲ ದಿನಗಳಿಂದ ಅಪ್ಪ ಆಸ್ಪತ್ರೆ ಸೇರಿದ್ದರು. ಅವರ ಸರ್ಜರಿ ಫೇಲ್ ಆಗಿತ್ತು. ಇಂದು ಅವರು ನಮ್ಮನ್ನು ಅಗಲಿದ್ದಾರೆ. ನನ್ನದೆಂಥ ಪರಿಸ್ಥಿತಿ ಈಗಲೇ ನನಗೆ ಕೋವಿಡ್ ಬಂದಿದೆ. ನನ್ನಮ್ಮನನ್ನು ಸಮಾಧಾನ ಮಾಡಲು ಹೋಗೋಕೆ ಆಗುತ್ತಿಲ್ಲ. ಇದು ಖಂಡಿತ ನ್ಯಾಯ ಅಲ್ಲ ಎಂದಿದ್ದಾರೆ.