October 9, 2026
Friday, October 9, 2026
spot_img

ಶಿರೂರು ಬಳಿ ಹೈವೇ ಪಟ್ರೋಲ್ ಸಹಿತ ವಾಹನಗಳಿಗೆ ಡಿಕ್ಕಿಯಾದ ಲಾರಿ: ಬೈಕ್ ಸವಾರ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಯಂತ್ರಣ ತಪ್ಪಿದ ಲಾರಿಯೊಂದು ಅಪಘಾತಕ್ಕೀಡಾದ ವಾಹನವನ್ನು ತೆರವುಗೊಳಿಸಲು ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪೊಲೀಸರ ಹೈವೆ ಪಟ್ರೋಲ್ ವಾಹನ ಹಾಗೂ ನಾಲ್ಕು ಬೈಕ್ ಗಳಿಗೆ ಡಿಕ್ಕಿಯಾದ ಘಟನೆ ಬೈಂದೂರು ತಾಲೂಕಿನ ಶಿರೂರು ಬಳಿ ನಡೆದಿದೆ.

ಈ ಘಟನೆಯಲ್ಲಿ ಬೈಕ್ ಸವಾರ ಶಿರೂರಿನ ನಾಗೇಂದ್ರ ಮಹಾಲೆ (45) ಮೃತಪಟ್ಟಿದ್ದಾರೆ.

ಹೆದ್ದಾರಿಯಲ್ಲಿ ಸರಕು ತುಂಬಿದ ಲಾರಿಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ರಸ್ತೆ ತಡೆ ಮಾಡಲಾಗಿತ್ತು. ವಾಹನ ಸಂಚಾರ ತಡೆಗೆ ಬ್ಯಾರಿಕೆಡ್ ಹಾಕಲಾಗಿತ್ತು . ಇಳಿಜಾರು ರಸ್ತೆಯಾದ ಕಾರಣ ಅತಿವೇಗದಿಂದ ನುಗ್ಗಿದ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಲಾರಿ ಹೈವೆ ಪೆಟ್ರೋಲ್ ವಾಹನಕ್ಕೆ ಡಿಕ್ಕಿಯಾಗದಿದ್ದಲ್ಲಿ ಬಾರಿ ಅವಘಡ ನಡೆಯುತ್ತಿತ್ತು. ಹೆದ್ದಾರಿ ಮುಂಭಾಗದಲ್ಲಿದ್ದ ಸಾರ್ವಜನಿಕರು ಹೊಟೇಲ್ ಎದುರುಗಡೆ ಇದ್ದ ವಾಹನಗಳಿಗೆ ಡಿಕ್ಕಿಯಾಗುವ ಸಾದ್ಯತೆಗಳಿತ್ತು.

ಇದನ್ನೂ ಓದಿ:

ರಬ್ಬರ್ ತುಂಬಿದ ಲಾರಿ ಕೇರಳದಿಂದ ಮಹಾರಾಷ್ಟ್ರದ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವೃತ್ತನಿರೀಕ್ಷಕ ಸಂತೋಷ ಕಾಯ್ಕಿಣಿ ಹಾಗೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read