ಸಿದ್ದರಾಮಯ್ಯರಿಗೆ ವೋಟ್​​ ಬ್ಯಾಂಕ್ ರಾಜಕಾರಣ ಬಿಟ್ಟು ಬೇರೇನು ಗೊತ್ತಿಲ್ಲ : ಸಚಿವ ಅಶ್ವತ್ಥನಾರಾಯಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಂಡತನ ಅಂದರೆ ಸಿದ್ದರಾಮಯ್ಯ, ನಿದ್ದೆತನ ಅಂದರೆ ಅಂದ್ರೆ ಸಿದ್ದರಾಮಯ್ಯ. ಅವರಿಗೆ ವೋಟ್​​ ಬ್ಯಾಂಕ್ ರಾಜಕಾರಣ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ 75 ವರ್ಷ ವಯಸ್ಸಾಗಿದೆ. ನಿವೃತ್ತಿ ತೆಗೆದುಕೊಂಡು, ಬೇರೆಯವರಿಗೆ ಅವಕಾಶ ಮಾಡಿಕೊಡುವುದನ್ನು ಬಿಟ್ಟು, ನಾನೇ ಅಂತಿದ್ದಾರೆ. ಕಾಂಗ್ರೆಸ್ ಗೆ ನಾಯಕತ್ವನೇ ಇಲ್ಲ. ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ ಎಂದು ಹೇಳಿದರು.

ಸೈಲೆಂಟ್​​ ಸುನೀಲ್ ವಿಚಾರ ಮಾತನಾಡಿದ ಸಚಿವರು, ಸೈಲೆಂಟ್ ಸುನೀಲ್ ಕಾರ್ಯಕ್ರಮಕ್ಕೂ, ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಸುನೀಲ್ ರಕ್ತದಾನ ಶಿಬಿರ ಮಾಡಿದ್ದರು. ಸಾಮಾಜಿಕ ಕಾರ್ಯಕ್ರಮ ಎಂದು ಇಬ್ಬರು ಪ್ರತಿನಿಧಿಗಳು ಹೋಗಿದ್ದರು. ನಾವು ಕಾನೂನಿಗೆ ಬೆಲೆ ಕೊಡುತ್ತೇವೆ. ಕಾನೂನು ಚೌಕಟ್ಟನ್ನು ನಾವು ಪರಿಪಾಲನೆ ಮಾಡ್ತೇವೆ. ಪಕ್ಷದ ಅಧ್ಯಕ್ಷರು ಕೂಡ ಇಂದು ಇದನ್ನೇ ಹೇಳಿದ್ದಾರೆ ಎಂದು ಸ್ಫಷ್ಟನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!