ಹೊಸದಿಗಂತ ವರದಿ ಅರಸೀಕೆರೆ:
ಮನುಜ ತನ್ನ ನೆರೆ ಹೊರೆಯವರ ಜೊತೆ ಪ್ರೀತಿ, ಸಮಾಧಾನ ಮತ್ತು ಹೃದಯ ವೈಶಾಲ್ಯತೆಯಿಂದ ಕೂಡಿದರೆ ಒಬ್ಬ ಸುಸಂಸ್ಕೃತ ಸಜ್ಜನ ವ್ಯಕ್ತಿಯಾಗುತ್ತಾನೆ ಎಂದು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಬೃಹನ್ಮಠದ ಜಗದ್ಗುರು ಶ್ರೀ ತರಳಬಾಳು ಶಿವಕುಮಾರ್ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು.
ಹಾಸನದ ಅರಕಲಗೂಡು ತಾಲೂಕಿನ ಕಸಬಾ ಹೋಬಳಿಯ ನಾಗತಿಹಳ್ಳಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿಯಾ ನೂತನ ದೇವಾಲಯದ ಪ್ರಾರಂಭೋತ್ಸವ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ʻಉಳ್ಳವರು ಶಿವಾಲಯ ಮಾಡುವರು, ನಾನೆನು ಮಾಡಲಿ ಬಡವನಯ್ಯಾʼ ಎಂಬ ವಚನ ಸಾರವನ್ನು ತಿಳಿಹೇಳಿ ಪ್ರಸ್ತುತ ರಾಜಕಾರಣಿಗಳು ತಮ್ಮ ಮನಬಂದಂತೆ ಹೊರಜಗತ್ತಿನಲ್ಲಿ ಕೆಸರು ಎರಚುವುದು ಬಿಟ್ಟು ವಿಧಾನಸಭೆಯಲ್ಲಿ ತಪ್ಪು ಒಪ್ಪುಗಳ ವಿಮರ್ಶೆ ಮಾಡಿ ನ್ಯಾಯ ರೀತಿಯಿಂದ ಜನ ಸೇವೆ ಮಾಡಿ ಎಂದು ಮಾರ್ಮಿಕವಾಗಿ ನುಡಿದರು.
ಸಾದು ವೀರಶೈವ ಸಮಾಜದ ಅಧ್ಯಕ್ಷ ಹಿರಿಯುರು ರೇವಣ್ಣ ಮಾತನಾಡಿ ದೇವಸ್ಥಾನದ ಪ್ರಾರಂಭೋತ್ಸವ ಕ್ಕೆ ಸಿರಿಗೆರೆ ಶ್ರೀಗಳು ಬರುವರೆಗೊ ದೇವಸ್ಥಾನದ ಪ್ರಾರಂಭೋತ್ಸವ ಮಾಡುವುದಿಲ್ಲ ಎಂದು ಹಠ ಹಿಡಿದು ಶ್ರೀ ಗಳು ಬರುವಿಕೆ ಇಡಿ ಗ್ರಾಮಕ್ಕೆ ಸಂತಸ ತಂದಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ದಿಬ್ಬದಳ್ಳಿ ಶಾಮ್ ಸುಂದರ್ ಶರಣ ಸಾಹಿತ್ಯ ಮತ್ತು ಪದ್ಧತಿ ಸಂಸ್ಕೃತಿ ಬಗ್ಗೆ ತಿಳಿಸಿದರು. ಶಾಸಕ ಕೆ.ಎಂ ಶಿವಲಿಂಗೇಗೌಡ ಹಾಗೂ ಜನಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.