ಚಳಿಗಾಲದಲ್ಲಿ ತುಂಬಾ ವೀಕ್ ಆಗ್ತೀರಾ? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ತಿನ್ನಿ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಳಿಗಾಲದಲ್ಲಿ ನೆಗಡಿ, ಕೆಮ್ಮು ಸಾಮಾನ್ಯ. ಶೀತ ವಾತಾವರಣಕ್ಕೆ ನಮ್ಮ ಇಮ್ಯುನಿಟಿ ಕ್ರಮೇಣ ಕಡಿಮೆಯಾಗುತ್ತದೆ. ಎನರ್ಜಿ ಲೆವೆಲ್ ಉಳಿಸಿಕೊಳ್ಳಲು ತಪ್ಪದೇ ಈ ಆಹಾರಗಳನ್ನು ಸೇವಿಸಿ..

ಕರ್ಜೂರ: ಇದರಲ್ಲಿ ಹೆಚ್ಚಿನ ಕ್ಯಾಲ್ಶಿಯಂ, ಪೊಟಾಶಿಯಂ, ಐರನ್ ಅಂಶಗಳಿದ್ದು, ಇದು ದೇಹದಲ್ಲಿ ಉಷ್ಣ ಹೆಚ್ಚಾಗಿಸುತ್ತದೆ.

ಬೀಜಗಳು: ಗೋಡಂಬಿ, ಬಾದಾಮಿ, ವಾಲ್ನಟ್ಸ್, ಪಿಸ್ತಾ ಸೇವಿಸುವುದರಿಂದ ಇದರಲ್ಲಿನ ಕ್ಯಾಲೊರಿ ಹಾಗೂ ಆರೋಗ್ಯಕರ ಫ್ಯಾಟ್ ದೇಹಕ್ಕೆ ಶಕ್ತಿ ಸಿಗಲಿದೆ.

ಮೊಟ್ಟೆ: ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ 12  ಸೇರಿದಂತೆ ಹಲವು ನ್ಯೂಟ್ರಿಯಂಟ್ಸ್, ಪ್ರೋಟೀನ್ಸ್ ಇದೆ. ಇದು ನಮ್ಮ ಇಮ್ಯೂನ್ ಸಿಸ್ಟನ್ ಅನ್ನು ಸುಧಾರಿಸುತ್ತದೆ.

ಬಾಳೆಹಣ್ಣು: ಇದರಲ್ಲಿ ವಿಟಮಿನ್ ಬಿ6 ಹಾಗೂ ಕಾರ್ಬೋಹೈಡ್ರೇಟ್ ಅಂಶಗಳಿದ್ದು, ದೇಹದಲ್ಲಿ ಎನರ್ಜಿ ಲೆವೆಲ್ ಹೆಚ್ಚಾಗುತ್ತದೆ.

ಓಟ್ಸ್: ಇದರಲ್ಲಿ ಹೆಚ್ಚಿನ ಫೈಬರ್ ಹಾಗೂ ಪ್ರೋಟೀನ್ಸ್ ಅಂಶಗಳಿವೆ. ಇದು ನಮ್ಮ ಎನರ್ಜಿ ಹೆಚ್ಚಿಸುತ್ತದೆ.

ಸೇಬು: ಇದರಲ್ಲಿ ಕ್ಯಾಟೆಚಿನ್, ಆಂಟಿ ಆಕ್ಸಿಡೆಂಟ್ ಅಂಶಗಳು ಹಲವು ರೋಗಗಳಿಂದ ಪಾರು ಮಾಡುತ್ತದೆ.

ಬೀಟ್ ರೂಟ್: ಪೊಟಾಶಿಯಂ, ಜಿಂಕ್ ಅಂಶಗಳು ಆರೋಗ್ಯ ವೃದ್ಧಿ ಮಾಡಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!