July 30, 2026
Thursday, July 30, 2026
spot_img

ನಾಗರಿಕರಿಗೆ ಬೆಲೆ ಹೆಚ್ಚಳದ ಬಿಸಿ, ಯುದ್ಧದ ಮಧ್ಯೆ ಎಲ್‌ಪಿಜಿ ಸಿಲಿಂಡರ್‌ ದರ ದಿಢೀರ್‌ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ. ಬೆಳ್ಳಂಬೆಳಗ್ಗೆ ಜನರಿಗೆ ಶಾಕ್‌ ಆಗಿದ್ದು, 14.2 ಕೆಜಿ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ದೇಶಾದ್ಯಂತ 60 ರೂಪಾಯಿ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಷ್ಟೇ ಅಲ್ಲದೇ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯೂ ಹೆಚ್ಚಳವಾಗಿದೆ. ಹೊಟೇಲ್‌, ಸಣ್ಣ ವಾಣಿಜ್ಯ ಸಂಸ್ಥೆಗಳು ಈ 19 ಕೆಜಿ ಸಿಲಿಂಡರ್‌ ಬಳಕೆ ಮಾಡುತ್ತವೆ. ಇದರ ಬೆಲೆ 115 ರೂಪಾಯಿ ಹೆಚ್ಚಿಸಲಾಗಿದೆ. ಸಿಲಿಂಡರ್‌ ಬೆಲೆ ಹೆಚ್ಚಳ ಹಿನ್ನೆಲೆ ದರ ಹೆಚ್ಚಳ ಸಾಧ್ಯತೆಯೂ ಇದೆ.

ಇಂದು ಬೆಂಗಳೂರು ನಗರದಲ್ಲಿ ಸಬ್ಸಿಡಿ ಇಲ್ಲದ ಎಲ್‌ಪಿಜಿ (LPG) ಬೆಲೆ 14.2 ಕೆಜಿ ಸಿಲಿಂಡರ್‌ಗೆ 855.50 ರೂಪಾಯಿ ಆಗಿದೆ. ವಾಣಿಜ್ಯ ಬಳಕೆ ಇಂಧನ 19 ಕೆಜಿ ದರ 1,814 ರೂಪಾಯಿ ಆಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !