Wednesday, June 7, 2023

Latest Posts

ಲಖನೌ ಲಯಬದ್ಧ ಬೌಲಿಂಗ್ ದಾಳಿಗೆ ಎಡವಿದ ಹೈದರಾಬಾದ್‌: ಗೆಲುವಿಗೆ ಸುಲಭ ಟಾರ್ಗೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಲಖನೌ ಲಯಬದ್ಧ ಬೌಲಿಂಗ್ ದಾಳಿಗೆ ಎಡವಿದ ಸನ್‌ರೈಸರ್ಸ್ ಹೈದರಾಬಾದ್‌ 8 ವಿಕೆಟ್ ನಷ್ಟಕ್ಕೆ 121 ರನ್ ಸಿಡಿಸಿದೆ.
ರಾಹುಲ್ ತ್ರಿಪಾಠಿ ಹಾಗೂ ಅನ್ಮೋಲ್‌ಪ್ರೀತ್ ಸಿಂಗ್ ಹೊರತು ಪಡಿಸಿದರೆ, ಇತರರಿಂದ ನಿರೀಕ್ಷಿತ ಹೋರಾಟವೂ ಬರಲಿಲ್ಲ.

ಟಾಸ್ ಗೆದ್ದ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮಯಾಂಕ್ ಅಗರ್ವಾಲ್ ಕೇವಲ 8 ರನ್ ಸಿಡಿಸಿ ಔಟಾದರು. ಅನ್ಮೋಲ್‌ಪ್ರೀತ್ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾದಿಂದ ಸನ್‌ರೈಸರ್ಸ್ ತಂಡ ಚೇತರಿಸಿಕೊಂಡಿತು. ಅನ್ಮೋಲ್‌ಪ್ರೀತ್ ಸಿಂಗ್ 26 ಎಸೆತದಲ್ಲಿ 31 ರನ್ ಕಾಣಿಕೆ ನೀಡಿದರು.

ಇತ್ತ ನಾಯಕ ಆ್ಯಡಿನ್ ಮಕ್ರಮ್ ಡಕೌಟ್ ಆದರು. ಹ್ಯಾರಿ ಬ್ರೂಕ್ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ರಾಹುಲ್ ತ್ರಿಪಾಠಿ 35 ರನ್ ಸಡಿಸಿ ಔಟಾದರು.

ವಾಶಿಂಗ್ಟನ್ ಸುಂದರ್ ಹಾಗೂ ಅಬ್ದುಲ್ ಸಮಾದ್ ಹೋರಾಟ ಚೇತರಿಸಿಕೆ ನೀಡಿದರೂ ಹೆಚ್ಚು ಹೊತ್ತು ಇರಲಿಲ್ಲ. ವಾಶಿಂಗ್ಟನ್ ಸುಂದರ್ 28 ಎಸೆತದ ಎದುರಿಸಿ 16 ರನ್ ಸಿಡಿಸಿ ನಿರ್ಗಮಿಸಿದರು. ಅಬ್ದುಲ್ ಸಮಾದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಆದಿಲ್ ರಶೀದ್ 4 ರನ್ ಸಿಡಿಸಿ ಔಟಾದರು. ಉಮ್ರಾನ್ ಮಲಿಕ್ ಡಕೌಟ್ ಆದರು. ಇತ್ತ ಅಬ್ದುಲ್ ಸಮಾದ್ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 121 ರನ್ ಸಿಡಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!