ಎರಡು ವರ್ಷಗಳ ಬಳಿಕ ಆರಂಭವಾದ ‘ಪ್ಯಾಲೇಸ್ ಆನ್ ವೀಲ್ಸ್’ ಐಷಾರಾಮಿ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ಐಷಾರಾಮಿ ರೈಲುಗಳಲ್ಲಿ ‘ಪ್ಯಾಲೇಸ್ ಆನ್ ವೀಲ್ಸ್’ ಕೂಡಾ ಒಂದು. ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಸೇವೆಯಿಂದ ಹೊರಗುಳಿದ ಈ ರೈಲು ಇದೀಗ ಶುರುವಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ರೈಲನ್ನು ಶನಿವಾರ ಪುನರಾರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್ ಗೆಹ್ಲೋಟ್ ಈ ರೈಲು 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ರಾಜಸ್ಥಾನದ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು. ಕೆಲಕಾಲ ರೈಲಿನಲ್ಲರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಈ ರೈಲನ್ನು ರಾಜಸ್ಥಾನ ಸರ್ಕಾರ ಮತ್ತು ಕೇಂದ್ರ ರೈಲ್ವೆ ಇಲಾಖೆ ಜಂಟಿಯಾಗಿ ನಿರ್ವಹಿಸುತ್ತದೆ. ಈ ರೈಲಿನಲ್ಲಿ ಪ್ರಯಾಣಿಕರಿಗಾಗಿ ಐಷಾರಾಮಿ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ‘ಪ್ಯಾಲೇಸ್ ಆನ್ ವೀಲ್ಸ್’ ನ ರೈಲು 1982 ರಿಂದ ಸೇವೆ ಸಲ್ಲಿಸುತ್ತಿದೆ.

ಈ ರೈಲಿನಲ್ಲಿ ಸ್ಟಾರ್ ಹೋಟೆಲ್ ಸೌಲಭ್ಯಗಳನ್ನು ಒದಗಿಸಲಾಗಿದೆ. ದೆಹಲಿ, ಆಗ್ರಾದಿಂದ ಜೈಪುರ, ಜೋಧ್‌ಪುರ, ಉದಯಪುರ, ಚಿತ್ತೋರ್‌ಗಢ, ಜೈಸಲ್ಮೇರ್ ಮತ್ತು ಭರತ್‌ಪುರಕ್ಕೆ ಪ್ರಯಾಣಿಸುತ್ತದೆ. ಇದು ಒಟ್ಟು ಏಳು ದಿನಗಳ ಪ್ರಯಾಣದ ನಡುವೆ ಅನೇಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!