spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಮದುವೆ ಮಹೂರ್ತಕ್ಕೆ ಸರಿಯಾಗಿ ಕೈಕೊಟ್ಟ ಕರೆಂಟ್;‌ ವಧು- ವರರೇ ಅದಲು ಬದಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮದುವೆ ಸಮಾರಂಭದಲ್ಲಿ ಮಹೂರ್ತಕ್ಕೆ ಸರಿಯಾಗಿ ಕರೆಂಟ್‌ ಕೈಕೊಟ್ಟಿದ್ದರಿಂದ ತಂಗಿಗೆ ನಿಶ್ಚಯವಾಗಿದ್ದ ವರ ಅಕ್ಕನಿಗೆ ಅಕ್ಕನಿಗೆ ನಿಶ್ಚಯವಾಗಿದ್ದ ವರ ತಂಗಿಗೆ ತಾಳಿ ಕಟ್ಟಿದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಅಸ್ಲಾನಾ ಗ್ರಾಮದಲ್ಲಿ ನಡೆದಿದೆ!.
ರಮೇಶ್ ಭೀವೆರೆ ಎಂಬುವವರ ಪುತ್ರಿಯರಾದ ನಿಕಿತಾ ಹಾಗೂ ಕರಿಷ್ಮಾಗೆ ವಿವಾಹ ನಿಶ್ಚಯವಾಗಿತ್ತು. ನಿಕಿತಾ ವಿವಾಹ ದಂಗ್ವಾರಾ ಭೋಲಾ ಎಂಬ ಯುವಕನ ಜೊತೆ ಹಾಗೂ ಕರಿಷ್ಮಾಳ ಮದುವೆ ಗಣೇಶ್ ಜೊತೆ ಫಿಕ್ಸ್ ಆಗಿತ್ತು.
ಮದುವೆಯ ದಿನ ರಾತ್ರಿ ಧಾರ್ಮಿಕ ವಿಧಿ ನಡೆಸುವಾಗ ಮಹೂರ್ತಕ್ಕೆ ಸರಿಯಾಗಿ ಕರೆಂಟ್‌ ಹೋಗಿದೆ. ಮದುಮಗಳಿಬ್ಬರೂ ಒಂದೇ ತರಹದ ಉಡುಗೆ ತೊಟ್ಟಿದ್ದರಿಂದ ಗೊಂದಲದಲ್ಲಿ ವಧು ವರರು ಅದಲು ಬದಲಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ವಿವಾಹದ ಬಳಿಕ ಏಳು ಪ್ರದಕ್ಷಿಣೆ ಹಾಕುವಾಗ ಕರೆಂಟ್‌ ಬಂದಾಗ ಎಲ್ಲರಿಗೂ ತಪ್ಪಾಗಿರುವುದು ತಿಳಿದಿದೆ. ನಂತರ ಹಿರಿಯರು ಕುಳಿತು ಸಮಾಲೋಚಿಸಿ ನಿಶ್ಚಿತ ವಧು- ವರರೊಂದಿಗೆ ಮತ್ತೊಮ್ಮೆ ವಿವಾಹ ಮಾಡಿ ತಪ್ಪನ್ನು ಸರಿಪಡಿಸಲಾಗಿದೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap