ದಿನಸಿ ವ್ಯಾಪಾರ ಕ್ಲೋಸ್‌ ಮಾಡಿದ ಮೀಶೋ: 300 ಉದ್ಯೋಗಿಗಳು ಔಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇ-ಕಾಮರ್ಸ್‌ ವೇದಿಕೆಯಾದ ಮೀಶೋ ಇದೀಗ ತನ್ನ ದಿನಸಿ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದು ನಾಗ್ಪುರ ಮತ್ತು ಮೈಸೂರು ಹೊರತುಪಡಿಸಿ ಭಾರತದ ಶೇಕಡಾ 90 ಕ್ಕಿಂತ ಹೆಚ್ಚು ನಗರಗಳಲ್ಲಿ ತನ್ನ ಸೂಪರ್‌ ಸ್ಟೋರ್‌ ಎಂದು ಕರೆಯಲ್ಪಡುವ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂದು ವರದಿಯೊಂದು ತಿಳಿಸಿದೆ. ಇದರಿಂದಾಗಿ ದಿನಸಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 300ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.

ಮೂಲಗಳ ವರದಿ ಪ್ರಕಾರ ಸುಮಾರು 300ಉದ್ಯೋಗಿಗಳು ವಜಾಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ವಾರ ಮೀಶೋ ಸೂಪರ್‌ ಸ್ಟೋರ್‌ ಕ್ಲೋಸ್‌ ಆಗಿದ್ದು ಸಿಟಿ ಲಾಂಚ್ ಮ್ಯಾನೇಜರ್‌ಗಳು, ಪ್ರೈಸಿಂಗ್ ಟೀಮ್ ಲೀಡ್‌ಗಳು, ವೇರ್‌ಹೌಸ್ ಮ್ಯಾನೇಜರ್‌ಗಳು, ಸೇಲ್ಸ್ ಎಕ್ಸಿಕ್ಯೂಟಿವ್‌ಗಳು ಸೇರಿದಂತೆ ಹಲವರು ವಜಾಗೊಂಡಿದ್ದಾರೆ. ಆದರೆ ಈ ಬಗ್ಗೆ ಕಂಪನಿ ಯಾವುದೇ ಹೇಳಿಕೆ ನೀಡಿಲ್ಲ ಎನ್ನಲಾಗಿದೆ.

ಮೀಶೋ ಸೂಪರ್‌ಸ್ಟೋರ್ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಎಪ್ರಿಲ್‌ ನಲ್ಲಿ ಮೀಶೋ ಫಾರ್ಮಿಸೋ ವನ್ನುಸೂಪರ್‌ಸ್ಟೋರ್‌ ಆಗಿ ಮರು ಬ್ರಾಂಡ್‌ ಮಾಡಿತ್ತು. ಅದು ಕಳೆದ ವರ್ಷ $570 ಮಿಲಿಯನ್ ಸಂಗ್ರಹಿಸಿತ್ತು ಮತ್ತು 200 ನಗರಗಳಿಗೆ ಉದ್ಯಮವನ್ನು ವಿಸ್ತರಿಸುವುದಾಗಿ ಕಂಪನಿ ಭರವಸೆ ನೀಡಿತ್ತು.

ಆದರೆ ಪ್ರಸ್ತುತ ತನ್ನ ದಿನಸಿ ವ್ಯಪಾರವನ್ನು ಕಂಪನಿಯು ಮುಚ್ಚಿದ್ದು 300 ಮಂದಿ ಉದ್ಯೋಗ ವಂಚಿತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!