ಮ್ಯಾಗಿ/ನೂಡಲ್ಸ್‌ನಲ್ಲಿ ಗರಿಗರಿಯಾದ ಬೋಂಡ ಮಾಡಬಹುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸದಾ ಮ್ಯಾಗಿ/ನೂಡಲ್ಸ್‌ ತಿಂದು ತಿಂದು ಬೇಜಾರಿಗಿದ್ರೆ ಹೊಸದಾಗಿ ಟ್ರೈ ಮಾಡಿ. ಇವುಗಳಿಂದ ಗರಿಗರಿಯಾದ ಬೋಂಡ ಮಾಡಿ ಸ್ನಾಕ್ಸ್‌ ತರ ತಿನ್ನಬಹುದು. ಬನ್ನಿ ಹೇಗೆ ಮಾಡೋದು ಅಂತ ನೋಡೊಣ.

ಬೇಕಾಗುವ ಪದಾರ್ಥಗಳು:

ಒಂದು ಮ್ಯಾಗಿ/ನೂಡಲ್ಸ್‌
ಈರುಳ್ಳಿ, ಹಸಿ ಮೆಣಸಿನಕಾಯಿ/ಅಚ್ಚ ಖಾರದಪುಡಿ,
ಉಪ್ಪು,ಕೊತ್ತಂಬರಿ ಸೊಪ್ಪು, ಕಡಲೆಹಿಟ್ಟು, ಎಣ್ಣೆ

ಮಾಡುವ ವಿಧಾನ: 

ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಮ್ಯಾಗಿ/ನೂಡಲ್ಸ್‌ ಹಾಗೂ ಅದರಲ್ಲಿರುವ ಮಸಾಲೆ ಹಾಗೆ ನೀರು ಹೀರುವವರೆಗೆ ಬೇಯಿಸಿಕೊಳ್ಳಿ. ಬಳಿಕ ಮತ್ತೊಂದು ಪಾತ್ರೆಗೆ ಬದಲಾಯಿಸಿ ಈರುಳ್ಳಿ, ಹಸಿ ಮೆಣಸಿನಕಾಯಿ, ಅಚ್ಚ ಖಾರದಪುಡಿ, ಉಪ್ಪು
ಕೊತ್ತಂಬರಿ ಸೊಪ್ಪು, ಅಗತ್ಯವಿದ್ದಷ್ಟು ಕಡಲೆಹಿಟ್ಟು ಹಾಕಿ ಹದವಾಗಿ ಕಲಸಿಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಕಾದ ಬಳಿಕ ಬಿಡಿಬಿಡಿಯಾಗಿ ಈ ಮಿಶ್ರಣವನ್ನ ಎಣ್ಣೆಯಲ್ಲಿ ಉದುರಿಸಿ ಕರಿದರೆ ಮ್ಯಾಗಿ ಬೋಂಡ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!