ವೈಕುಂಠ ಏಕಾದಶಿ ಹಿನ್ನೆಲೆ ತಿಮ್ಮಪ್ಪನ ದರ್ಶನ ಪಡೆದ ಮಹಾರಾಷ್ಟ್ರ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದರ್ಶನದ ಬಾಗಿಲು ತೆರೆಯಲಾಗಿದೆ. ತಿಮ್ಮಪ್ಪನ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ಏಕ್ ನಾಥ್ ಶಿಂಧೆ ತಿರುಪತಿ ತಿಮ್ಮಪ್ಪನಿಗೆ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.

ಜೊತೆಗೆ ಎಪಿ ಸಚಿವರಾದ ಅಂಬಾಟಿ ರಾಂಬಾಬು, ಅಮರ್ ನಾಥ್, ವಿಶ್ವರೂಪ್, ಪೆದ್ದಿರೆಡ್ಡಿ, ಜಯರಾಂ, ಕರುಮುರಿ, ಉಪಶ್ರೀ, ಟಿಸಿಎಸ್ ಅಧ್ಯಕ್ಷ ನಟರಾಜನ್, ಉಪ ಸಿಎಂ ನಾರಾಯಣಸ್ವಾಮಿ, ಸಂಸದ ಮಿಥುನ್ ರೆಡ್ಡಿ, ಉಪಸಭಾಪತಿ ವೀರಭದ್ರಸ್ವಾಮಿ, ಮಾಜಿ ಸಚಿವ ವೇಲಂಪಲ್ಲಿ, ಆರ್.ಕೃಷ್ಣಯ್ಯ, ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ರವೀಂದ್ರಬಾಬು, ಕೆ. ಲಕ್ಷ್ಮಣ್, ಚಿತ್ರನಟ ರಾಜೇಂದ್ರ ಪ್ರಸಾದ್, ತೆಲಂಗಾಣ ಸಚಿವರಾದ ಶ್ರೀನಿವಾಸ್ ಗೌಡ್, ಗಂಗೂಲಾ ಕಮಾಲ್ಕರ್ ಮತ್ತು ಎರ್ರಬೆಳ್ಳಿ ದಯಾಕರ್ ರಾವ್ ಶ್ರೀವಾರಿ ದರ್ಶನ ಪಡೆದರು.

ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಅರ್ಚಕರು ಧನುರ್ಮಾಸ ವಿಶೇಷ ಪೂಜೆ, ಕೈಂಕರ್ಯ, ನಿವೇದನೆ ನೆರವೇರಿಸಿದರು. ತಿರುಮಲ ದೇವರ ದರ್ಶನ ಪಡೆಯಲು ವೈಕುಂಠ ದ್ವಾರದ ಮೂಲಕ ಭಕ್ತರು ಹರಿದು ಬರುತ್ತಿದ್ದಾರೆ. ಶ್ರೀವಾರಿಗೆ ಕೈಂಕರ್ಯಗಳನ್ನು ಪೂರೈಸಿದ ಬಳಿಕ ಮಧ್ಯರಾತ್ರಿ 12.5ಕ್ಕೆ ದರ್ಶನ ಆರಂಭವಾಯಿತು. ಮೊದಲಿಗೆ ಟಿಟಿಡಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ವೈಕುಂಠದಲ್ಲಿ ಸಂಚರಿಸಿದರು. ನಂತರ ವೈಕುಂಠದ ಮೂಲಕ ಗಣ್ಯರು ದರ್ಶನ ಪಡೆದರು. ಪ್ರಮುಖರಾದ ಸಚಿವರು, ಶಾಸಕರು, ಎಂಎಲ್ ಸಿಗಳು ಹಾಗೂ ಧರ್ಮದರ್ಶಿ ಮಂಡಳಿ ಸದಸ್ಯರು ಭೇಟಿ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!