Monday, October 2, 2023

Latest Posts

ಬಾಯಿಯ ನೈರ್ಮಲ್ಯ ಅಭಿಯಾನಕ್ಕೆ ‘ನಗುವಿನ ರಾಯಭಾರಿ’ ಆಗಿ ಸಚಿನ್‌ ತೆಂಡುಲ್ಕರ್ ನೇಮಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಯಿಯ ಆರೋಗ್ಯ ಉತ್ತೇಜಿಸುವ ಮಹಾರಾಷ್ಟ್ರದ ಸ್ವಚ್ಛ ಮುಖ್‌ ಅಭಿಯಾನಕ್ಕೆ ಕ್ರಿಕೆಟ್‌ ಐಕಾನ್‌ ಸಚಿನ್‌ ತೆಂಡೂಲ್ಕರ್‌ ಅವರು ‘ನಗುವಿನ ರಾಯಭಾರಿ’ (ಸ್ಮೈಲ್‌ ಅಂಬಾಸಿಡರ್‌) ಆಗಿ ನೇಮಕಗೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಂಗಳವಾರ ತೆಂಡೂಲ್ಕರ್ ಅವರೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು.

ಮುಂದಿನ ಐದು ವರ್ಷಗಳ ಕಾಲ ತೆಂಡೂಲ್ಕರ್ ಪ್ರಚಾರದ ಬ್ರಾಂಡ್‌ ಅಂಬಾಸಿಡರ್‌ ಆಗಿರುತ್ತಾರೆ. ಸ್ವಚ್ಛ ಮುಖ್ ಅಭಿಯಾನ ಬಾಯಿಯ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸಲು ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಭಾರತೀಯ ದಂತ ಸಂಘವು ಕೈಗೊಂಡಿರುವ ರಾಷ್ಟ್ರೀಯ ಅಭಿಯಾನವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!