ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಟಾಲಿವುಡ್‌ ಪ್ರಿನ್ಸ್‌ ಶರ್ಟ್‌ ಲೆಸ್‌ ಪೋಸ್:‌ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್ ಸ್ಟಾರ್ ಮಹೇಶ್ ಬಾಬು ಕುಟುಂಬ ಸಮೇತ ದೇಶದೆಲ್ಲೆಡೆ ಸುತ್ತುತ್ತಿದ್ದಾರೆ. ತ್ರಿವಿಕ್ರಮ್ ಸಿನಿಮಾದ ಶೂಟಿಂಗ್ ಇನ್ನೂ ಶುರುವಾಗದ ಕಾರಣ ವಿದೇಶದಿಂದ ವಾಪಸ್ಸಾಗಿರುವ ಮಹೇಶ್ ಇಲ್ಲೇ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಪ್ರಿನ್ಸ್‌ ಪತ್ನಿ ನಮ್ರತಾ ಅವರು ಮಹೇಶ್ ಸ್ವಿಮ್ಮಿಂಗ್ ಫೂಲ್‌ನಲ್ಲಿ ಈಜಲು ಸಿದ್ಧರಾಗಿರುವ ಎರಡು ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಇದರಲ್ಲಿ ಹೊಸತೇನಿದೆ? ಅಂದುಕೊಂಡ್ರಾ…ಇದೇ ಮೊದಲ ಬಾರಿಗೆ ಮಹೇಶ್ ಬಾಬು ಶರ್ಟ್ ಇಲ್ಲದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮಹೇಶ್ ಸಾಮಾನ್ಯವಾಗಿ ತನ್ನ ದೇಹವನ್ನು ಪ್ರದರ್ಶಿಸಲು ಇಷ್ಟಪಡುವುದಿಲ್ಲ. ಇಷ್ಟು ವರ್ಷಗಳಲ್ಲಿ ಅವರು ತೆರೆಮೇಲೆ ಅಂಗಿ ಹಾಕದ ದೃಶ್ಯವನ್ನೇ ಮಾಡಿಲ್ಲ. ಅನೇಕ ನಾಯಕರು ಫೈಟ್‌ಗಳು ಮತ್ತು ಹಾಡುಗಳಲ್ಲಿ ಶರ್ಟ್‌ಲೆಸ್ ದೃಶ್ಯಗಳನ್ನು ಮಾಡುತ್ತಾರೆ. ಆದರೆ ಮಹೇಶ್ ಇನ್ನೂ ಮಾಡಿಲ್ಲ. ಅವರೂ ಈ ರೀತಿ ತಮ್ಮ ಫೋಟೋಗಳನ್ನು ಹೊರಗೆ ಎಲ್ಲಿಯೂ ಹಾಕಿಲ್ಲ.

ನಮ್ರತಾ ಮಹೇಶ್ ಅವರು ಮೊದಲ ಬಾರಿಗೆ ಶರ್ಟ್ ಇಲ್ಲದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಮತ್ತು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಮಹೇಶ್ ಅವರನ್ನು ಷರ್ಟ್ ಲೆಸ್ ಆಗಿ ನೋಡಿದ್ದು, ಇಷ್ಟು ಒಳ್ಳೆ ದೇಹದಾರ್ಢ್ಯವಿರುವ ನೀವು ಶರ್ಟ್ ಲೆಸ್ ಸೀನ್ ಗಳನ್ನು ಯಾಕೆ ಮಾಡಲ್ಲ, ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!