ಭಾರತದಿಂದ ಕಳವಾಗಿದ್ದ 7 ಪುರಾತನ ಕಲಾಕೃತಿಗಳನ್ನು ಮರಳಿಸಿದ ಸ್ಕಾಟ್ಲೆಂಡ್ ಮ್ಯೂಸಿಯಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್
19 ನೇ ಶತಮಾನದಲ್ಲಿ ಭಾರತದ ವಿವಿಧ ಹಿಂದೂ ದೇವಾಲಯಗಳಿಂದ ಕಳುವಾಗಿ ಸ್ಕಾಟ್‌ಲ್ಯಾಂಡ್‌ ಸೇರಿದ್ದ ಏಳು ಪ್ರಾಚೀನ ಕಲಾಕೃತಿಗಳನ್ನು ಗ್ಲಾಸ್ಗೋದ ವಸ್ತು ಸಂಗ್ರಹಾಲಯದಿಂದ ಭಾರತಕ್ಕೆ ಮರಳಿ ವರ್ಗಾಯಿಸಲಾಗಿದೆ.
ಭಾರತ ಹಾಗೂ ಸ್ಕಾಟ್‌ ಲ್ಯಾಂಡ್‌ ಸರ್ಕಾರಗಳ ನಡುವಿನ ಒಪ್ಪಂದದ ಪ್ರಕಾರ ಕೆಲ್ವಿಂಗ್ರೋವ್ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂನಲ್ಲಿ ಇಂಗ್ಲೆಂಡ್‌ನ ಭಾರತೀಯ ಹೈಕಮಿಷನರ್ ಅವರ ಉಪಸ್ಥಿತಿಯಲ್ಲಿ ಈ ಅಮೂಲ್ಯ ವಸ್ತುಗಳನ್ನು ಹಸ್ತಾಂತರಿಸಲಾಗಿದೆ. ಭಾರತಕ್ಕೆ ಹಿಂದಿರುಗಲಿರುವ ಈ ಏಳು ಪುರಾತನ ವಸ್ತುಗಳಲ್ಲಿ 14 ನೇ ಶತಮಾನಕ್ಕೆ ಸೇರಿದ್ದ ಇಂಡೋ-ಪರ್ಷಿಯನ್ ಮಾದರಿಯ ಖಡ್ಗ ಮತ್ತು ಕಾನ್ಪುರದ ದೇವಾಲಯದಿಂದ ಕಳವು ಮಾಡಲಾಗಿದ್ದ 11 ನೇ ಶತಮಾನದಲ್ಲಿ ಕೆತ್ತಿದ್ದ ಕಲ್ಲಿನ ಬಾಗಿಲು ಮತ್ತಿತರ ಅಮೂಲ್ಯ ವಸ್ತುಗಳು ಸೇರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!