ಅಭಿಮಾನಿಗಳಿಗಾಗಿ ಟಾಲಿವುಡ್ ಪ್ರಿನ್ಸ್‌ ವಿಶೇಷ ಸಂದೇಶ, ಪತ್ರದಲ್ಲೇನಿದೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ 12 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಪರುಶುರಾಮ್ ನಿರ್ದೇಶನದಲ್ಲಿ 14 ರೀಲ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟ್ರೇಲರ್‌ಗಳಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಮಹೇಶ್ ತಮ್ಮ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದಿದ್ದು, ಪತ್ರ ವೈರಲ್‌ ಆಗಿದೆ.

ಪತ್ರದಲ್ಲಿ ಮಹೇಶ್ ಸಿನಿಮಾ ಹಾಡುಗಳ ಜೊತೆಗೆ ತಮ್ಮ ಮುಂದಿನ ಚಿತ್ರದ ಅಪ್ಡೇಟ್ ಅನ್ನು  ನೀಡಿದ್ದಾರೆ. ನೀವೆಲ್ಲರೂ ಕುತೂಹಲದಿಂದ ಕಾಯುತ್ತಿರುವ ‘ಸರ್ಕಾರು ವಾರಿ ಪಾಟ’ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ನೋಡಿ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ ಎಂದಿದ್ದಾರೆ.

ಮಾತಿನ ಮಾಂತ್ರಿಕ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಹರಿಕಾ & ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್.‌ ರಾಧಾಕೃಷ್ಣ (ಚಿನಬಾಬು) ನಿರ್ಮಾಣದಲ್ಲಿ ಮುಂದಿನ ಚಿತ್ರವು ಜೂನ್‌ನಲ್ಲಿ ರೆಗ್ಯುಲರ್ ಶೂಟಿಂಗ್ ಪ್ರಾರಂಭವಾಗಲಿದೆ. ಸದಾ ನಿಮ್ಮ ಆದರಾಭಿಮಾನಗಳನ್ನು ಬಯಸುವ ನಿಮ್ಮ ಮಹೇಶ್ ಬಾಬು ಎಂದು ಪತ್ರದಲ್ಲಿ ಬರೆದಿದ್ದಾರೆ.

Image

ಮಹೇಶ್ ಬಾಬು, ಅಭಿಮಾನಿಗಳಿಗೆ ಪತ್ರ ಬರೆದಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಆದರೆ, ಇದುವರೆಗೂ ಎಲ್ಲೂ ಮಹೇಶ್ ಬಾಬು ಅಧಿಕೃತವಾಗಿ ಪೋಸ್ಟ್ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ ಈ ಲೆಟರ್‌ ಫ್ಯಾನ್ ಮೇಡ್ ಲೆಟರ್ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!